ಸಮಾನತೆಗಾಗಿ ಶ್ರಮಿಸಿದ ಶರಣ ಚೌಡಯ್ಯ | Lecture

ಸೊರಬದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸದಲ್ಲಿ ಮಂಜುಳಾ ಹೆಗಡಾಳ್, ಈರೇಶ್ ಮೇಸ್ತ್ರಿ, ಅರುಣ್‌ಕುಮಾರ್, ನಾಗರಾಜ ಎಲೆ, ಕೆ.ಜಿ.ಕುಮಾರ್ ಇತರರಿದ್ದರು.
ಸೊರಬದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸದಲ್ಲಿ ಮಂಜುಳಾ ಹೆಗಡಾಳ್, ಈರೇಶ್ ಮೇಸ್ತ್ರಿ, ಅರುಣ್‌ಕುಮಾರ್, ನಾಗರಾಜ ಎಲೆ, ಕೆ.ಜಿ.ಕುಮಾರ್ ಇತರರಿದ್ದರು.
Published on
ಸೊರಬ: ಹನ್ನೆರಡನೇ ಶತಮಾನದಲ್ಲಿ ಅಂಬಿಗರ ಚೌಡಯ್ಯ ಅವರ ನೇರ ಮಾತಿನ ವಚನಗಳು ಸಮಾಜದಲ್ಲಿ ಅಸಮಾನತೆ ಹೋಗಲಾಡಿಸುವಲ್ಲಿ ಪರಿಣಾಮಕಾರಿ ಆಗಿದ್ದವು ಎಂದು ನಿವೃತ್ತ ಉಪನ್ಯಾಸಕ ಎಚ್.ಜಿ.ಅರುಣ್‌ಕುಮಾರ್ ಅಭಿಪ್ರಾಯಪಟ್ಟರು. 
ಬುಧವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ತಾಲೂಕು ಗಂಗಾಮತ ಸಮಾಜದಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು.
ಶರಣ ಪರಂಪರೆಯಲ್ಲಿ ಚೌಡಯ್ಯ ಅವರಿಗೆ ಮಹತ್ವದ ಸ್ಥಾನವಿದೆ. ಕಡು ಟೀಕೆಗಳ ಮೂಲಕವೇ ಉತ್ತರ ನೀಡುತ್ತಿದ್ದರು. ಬಸವಣ್ಣನವರ ಆದರ್ಶ ಮತ್ತು ತತ್ವಗಳನ್ನು ಸಾರುತ್ತ ಸಮಸಮಾಜ ನಿರ್ಮಾಣ ಮಾಡಲು ಮುಂದಾಗಿದ್ದರು. ಅವರ ಆದರ್ಶಗಳನ್ನು ಯುವಪೀಳಿಗೆ ಪಾಲಿಸಬೇಕು  ಎಂದರು.
ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷ ಈರೇಶ್ ಮೇಸ್ತ್ರಿ ಮಾತನಾಡಿ, ಚೌಡಯ್ಯ ಅವರು ತಮ್ಮ ನೇರ, ನಿಷ್ಠುರ ಮಾತುಗಳಿಂದ ಶರಣ ಪರಂಪರೆಯಲ್ಲಿ ಶ್ರೇಷ್ಠ ಸಮಾಜ ಸುಧಾರಕರಾಗಿ ಗುರುತಿಸಿಕೊಂಡಿದ್ದರು. ತಾಲೂಕಿನಲ್ಲಿ ಗಂಗಾಮತ ಸಮಾಜ ಸಂಘಟನೆ ಕೊರತೆಯಿಂದ ಸ್ಥಾನಮಾನದಿಂದ ವಂಚಿತವಾಗಿದೆ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಸಂಘಟನೆಯಲ್ಲಿ ತೊಡಗಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ತಾಲೂಕು ಗಂಗಾಮತ ಸಮಾಜದ ಉಪಾಧ್ಯಕ್ಷ ನಾಗರಾಜ ಎಲೆ, ಟೌನ್ ಅಧ್ಯಕ್ಷ ನಾಗರಾಜ್, ಕೃಷಿ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್, ನೀಲಪ್ಪ, ಜಗದೀಶ್, ರಾಘವೇಂದ್ರ, ಬಸವಂತಪ್ಪ ಗುರಕಿ, ಮಹಾಬಲೇಶ್ವರ ನಾಯ್ಕ, ಶಿವಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net