ಶಕುಂತಲಾ ಪ್ರೌಢಶಾಲೆ ಬೆಳ್ಳಿಹಬ್ಬ ಶುಕ್ರವಾರ | school programme

ತಾಲೂಕಿನ ಹೊಸಬಾಳೆ ಗ್ರಾಮದ ಅನುದಾನಿತ ಶಕುಂತಲಾ ಪ್ರೌಢಶಾಲೆಯ ಬೆಳ್ಳಿಹಬ್ಬ ಆಚರಣೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕೆ.ಅಜ್ಜಪ್ಪ, ಎಚ್.ಎಸ್.ವೀರಭದ್ರಪ್ಪ, ಮಂಜಪ್ಪ ಇತರರಿದ್ದರು.
ತಾಲೂಕಿನ ಹೊಸಬಾಳೆ ಗ್ರಾಮದ ಅನುದಾನಿತ ಶಕುಂತಲಾ ಪ್ರೌಢಶಾಲೆಯ ಬೆಳ್ಳಿಹಬ್ಬ ಆಚರಣೆಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕೆ.ಅಜ್ಜಪ್ಪ, ಎಚ್.ಎಸ್.ವೀರಭದ್ರಪ್ಪ, ಮಂಜಪ್ಪ ಇತರರಿದ್ದರು.
Published on
ಸೊರಬ: ಹೊಸಬಾಳೆ ಶಕುಂತಲಾ ಪ್ರೌಢಶಾಲೆಯು ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಉನ್ನತಿ ಹಾಗೂ ಕೌಶಲ ಅಭಿವೃದ್ಧಿಗಾಗಿ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಪತ್ನಿ ಶಕುಂತಲಾ ಅವರ ಹೆಸರಿನಲ್ಲಿ ಆರಂಭಗೊಂಡ ಪ್ರೌಢಶಾಲೆಯು ಕ್ರೀಡೆ ಮತ್ತು ಶಿಕ್ಷಣದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ಅಜ್ಜಪ್ಪ ಕಾಸರಗುಪ್ಪೆ ಹೇಳಿದರು.
ತಾಲೂಕಿನ ಹೊಸಬಾಳೆ ಗ್ರಾಮದ ಅನುದಾನಿತ ಶಕುಂತಲಾ ಪ್ರೌಢಶಾಲೆಗೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಳ್ಳಿಹಬ್ಬ ಆಚರಣೆ ಪೂರ್ವಭಾವಿ ಸಭೆಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಸಂಸ್ಥೆ 1993ರಲ್ಲಿ ಸ್ಥಾಪನೆಯಾಗಿದ್ದು, 2020ರಲ್ಲೇ ಬೆಳ್ಳಿ ಹಬ್ಬ ಆಚರಣೆ ಮಾಡಬೇಕಿತ್ತು. ಕರೋನಾ ಕಾಲದಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ. ಇಂದು ಹೆಚ್ಚುವರಿ ಕಟ್ಟಡದ ಜ್ಞಾಪಕಾರ್ಥವಾಗಿ ಬೆಳ್ಳಿಹಬ್ಬವನ್ನು ಜೂ.5ರಂದು ಆಚರಿಸಲಾಗುತ್ತಿದೆ. ಶಾಸಕ ಮಧು  ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಗೋಪಾಲಕೃಷ್ಣ ಬೇಳೂರು, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ಗೊಗ್ಗೆಹಳ್ಳಿ ಶ್ರೀ ಸಂಗಮೇಶ್ವರ ಸ್ವಾಮೀಜಿ ಭಾಗವಹಿಸುವರು. ಬೆಳಗ್ಗೆ ಪೂಜೆ ಕೈಂಕರ್ಯಗಳು ಆರಂಭವಾಗಲಿವೆ. ಸಮಾಜದ ಹಿರಿಯರನ್ನು ಸನ್ಮಾನಿಸಲಾಗುವುದು ಎಂದರು.
ಕಾರ್ಯದರ್ಶಿ ಎಚ್.ಎಸ್.ವೀರಭದ್ರಪ್ಪ ಮಾತನಾಡಿ,  ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ನಮ್ಮ ಶಾಲೆಯು ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಹಳೇ ವಿದ್ಯಾರ್ಥಿಗಳು, ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಪಾಲಕರು ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಶಿಕ್ಷಕ ಮಂಜಪ್ಪ, ಶಿಕ್ಷಕರಾದ ಧರ್ಮಪ್ಪ, ಶಿವಪ್ಪ, ಪಾಲಕರಾದ ಅಣ್ಣಪ್ಪ, ಪುಟ್ಟಸ್ವಾಮಿ, ಲೋಹಿತ್, ನಾರಾಯಣಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net