ಅಣು ಸ್ಥಾವರ ಯೋಜನೆ ಕೈಬಿಡುವಂತೆ ಸರಣಿ ಹೋರಾಟ

ಸಾಗರದಲ್ಲಿ ಅಣು ಸ್ಥಾವರ ಯೋಜನೆ ವಿರೋಧಿ ಹೋರಾಟ ಕುರಿತ ಭಿತ್ತಿಚಿತ್ರವನ್ನು ಬಿಡುಗಡೆಗೊಳಿಸಲಾಯಿತು. ಇಂದೂಧರ ಬೇಸೂರು, ತೀ.ನ.ಶ್ರೀನಿವಾಸ್, ಸೀತಾರಾಮ, ಶಿವಾನಂದ ಗೌಡ, ಅರವಿಂದ ಇತರರಿದ್ದರು.
ಸಾಗರದಲ್ಲಿ ಅಣು ಸ್ಥಾವರ ಯೋಜನೆ ವಿರೋಧಿ ಹೋರಾಟ ಕುರಿತ ಭಿತ್ತಿಚಿತ್ರವನ್ನು ಬಿಡುಗಡೆಗೊಳಿಸಲಾಯಿತು. ಇಂದೂಧರ ಬೇಸೂರು, ತೀ.ನ.ಶ್ರೀನಿವಾಸ್, ಸೀತಾರಾಮ, ಶಿವಾನಂದ ಗೌಡ, ಅರವಿಂದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 21ರಿಂದ ಸಾಗರ ಎಸಿ ಕಚೇರಿ ಮುಂಭಾಗ ಧರಣಿ
  • 27ರಂದು ಡಿಸಿ ಕಚೇರಿ ಎದುರು ಪ್ರತಿಭಟನೆ
  • ಬಿ.ಎ.ಇಂದೂಧರ ಬೇಸೂರು ಮಾಹಿತಿ
ಸಾಗರ: ತಾಲೂಕಿನ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ ಕೈಬಿಡುವ ತನಕ ಸರಣಿ ಹೋರಾಟ ರೂಪಿಸಲಾಗಿದೆ ಎಂದು ಯೋಜನೆ ವಿರೋಧಿ ಹೋರಾಟ ವೇದಿಕೆ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಹೇಳಿದರು.
ಅಣುಸ್ಥಾವರ ವಿರೋಧಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅಣು ಸ್ಥಾವರ ಯೋಜನೆಯನ್ನು ಬೇಸೂರು ಸೇರಿ ಮಲೆನಾಡಿನ ಯಾವುದೇ ಪ್ರದೇಶದಲ್ಲಿ ಮಾಡಲು ನಮ್ಮ ವಿರೋಧವಿದೆ ಎಂದು ತಿಳಿಸಿದರು.
ಮೇ 18ರಂದು ಹುಲಿದೇವರಬನದಲ್ಲಿ ಬೆಳಗ್ಗೆ 10.30ಕ್ಕೆ 200ಕ್ಕೂ ಹೆಚ್ಚು ಮಕ್ಕಳು ನಮ್ಮೂರಿಗೆ ಅಣು ವಿದ್ಯುತ್ ಸ್ಥಾವರ ಬೇಡ ಎಂದು ಪ್ರತಿಭಟನೆ ನಡೆಸಲಿದ್ದಾರೆ. ಮೇ 20ರಂದು ಬೇಸೂರು ಬಸವಣ್ಣ ದೇವಸ್ಥಾನದಿಂದ ಸಾಗರ ಎಸಿ ಕಚೇರಿವರೆಗೆ ಬೆಳಗ್ಗೆ 9ರಿಂದ ಪಾದಯಾತ್ರೆ ಮೂಲಕ ಯೋಜನೆ ವಿರೋಧಿ ಜನಾಂದೋಲನ ನಡೆಯಲಿದೆ. ಮೇ 21ರಿಂದ 26ರವರೆಗೆ ಎಸಿ ಕಚೇರಿ ಎದುರು ನಿರಂತರ ಧರಣಿ ನಡೆಯಲಿದೆ. ಮೇ 27ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಯೋಜನೆ ಕೈಬಿಡಲಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕೃತವಾಗಿ ಲಿಖಿತ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಹ ಹೋರಾಟ ರೂಪಿಸಲಾಗುತ್ತಿದೆ. ಅಣು ವಿದ್ಯುತ್ ಸ್ಥಾವರ ಹೆಸರಿನಲ್ಲಿ ನಮ್ಮನ್ನು ಒಕ್ಕಲೆಬ್ಬಿಸಿದರೆ ಎಲ್ಲಿಗೆ ಹೋಗಬೇಕು ಎಂಬ ಆತಂಕ ಸಾವಿರಾರು ಕುಟುಂಬಗಳದ್ದಾಗಿದೆ. ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
"

ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ ವಿನಾಶಕಾರಿ. ಯೋಜನೆ ಹೆಸರಿನಲ್ಲಿ ಮತ್ತೊಂದು ದಮನಕಾರಿ ಯೋಜನೆ ಜಾರಿಗೆ ತರುವುದನ್ನು ಸಹಿಸುವುದಿಲ್ಲ. ಯೋಜನೆ ಸಂಪೂರ್ಣ ಕೈಬಿಟ್ಟಿದ್ದೇವೆ ಎಂದು ಲಿಖಿತ ಘೋಷಣೆ ಮಾಡುವವರೆಗೆ ಹೋರಾಟ ಮುಂದುವರೆಯಲಿದೆ. ತೀ.ನ.ಶ್ರೀನಿವಾಸ್ಮಲೆನಾಡು ರೈತ ಹೋರಾಟ ವೇದಿಕೆ ಸಂಚಾಲಕ

ಸೀತಾರಾಮ ಕುರುವರಿ, ಶಿವಾನಂದ ಗೌಡ, ಅರವಿಂದ, ಭಾಸ್ಕರ, ನಾಗರಾಜ್, ನಾಗೇಂದ್ರ ಸಾಗರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net