ಹೊಳೆಹೊನ್ನೂರು: ಕಸ ಸಂಗ್ರಹಣೆಗಾಗಿ ಮನೆ ಬಾಗಿಲಿಗೆ ಬರುವ ವಾಹನಗಳಿಗೆ ಜನರು ಒಣ ಮತ್ತು ಹಸಿ ಕಸ ವಿಂಗಡಿಸಿ ಕೊಡಬೇಕು ಎಂದು ಹೊಳೆಹೊನ್ನೂರು ಪ್ರಭಾರ ಮುಖ್ಯಾಧಿಕಾರಿ ಡಿ.ಎಸ್.ಹೇಮಂತ್ ಕುಮಾರ್ ಹೇಳಿದರು.
ಪಟ್ಟಣ ಪಂಚಾಯಿತಿಯಿಂದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಕಸ ವಿಂಗಡಿಸುವುದರಿಂದ ಕಸ ಸಂಸ್ಕರಣೆ ಮಾಡಲು ಅನುಕೂಲ ಆಗುತ್ತದೆ. ಪರಿಸರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದಂತೆ ಆಗುತ್ತದೆ ಎಂದು ತಿಳಿಸಿದರು.
ಆರೋಗ್ಯ ವೀಕ್ಷಕ ಎನ್.ಅಣ್ಣಪ್ಪ ಸ್ವಾಮಿ, ಎಸ್.ಪ್ರದೀಪ್, ಎಚ್.ಕೆ.ರಂಗನಾಥ್, ಭರತ್, ರಂಗಪ್ಪ, ಕರಿಯಪ್ಪ, ಹಾಲೇಶ್, ಸ್ವಾತಿ, ಜಯಶ್ರೀ, ಎಂ.ಕೆ.ಅಣ್ಣಯ್ಯ, ಅಂಜನಪ್ಪ, ಕನ್ನೇಕೊಪ್ಪ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಚ್.ಬಸವರಾಜ್ ಇತರರಿದ್ದರು.