ತ್ಯಾಗರ್ತಿ ಕ್ಲಸ್ಟರ್‌ನ 15 ಶಾಲೆ ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಜೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಹಿರೇಬಿಲಗುಂಜೆ ಗ್ರಾಪಂ ಅಧ್ಯಕ್ಷೆ ಸುಜಾತಾ, ತ್ಯಾಗರ್ತಿ ಗ್ರಾಪಂ ಅಧ್ಯಕ್ಷೆ ಪ್ರಭಾವತಿ, ವೀಣಾ ಜಗದೀಶ್, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಅನ್ನಪೂರ್ಣಾ, ಧರ್ಮರಾಜ, ಗಣಪತಿ ಮಂಡಗಳಲೆ, ಟಿ.ಕೆ.ಹನುಮಂತಪ್ಪ, ಮುಖ್ಯ ಶಿಕ್ಷಕಿ ಅಶ್ವಿನಿ, ನೇತ್ರಾವತಿ, ಬಸವರಾಜ, ನಾಗರಾಜ್, ಲಕ್ಷ್ಮಣ್ ಇತರರಿದ್ದರು.