ಸನಾತನ ಧರ್ಮದಲ್ಲಿ ವೇದ, ಉಪನಿಷತ್ತು, ಪುರಾಣಗಳು, ಧಾರ್ಮಿಕ ಕೃತಿಗಳು, ಕಾವ್ಯಗಳಿವೆ. ಎಲ್ಲ ಜಿಜ್ಞಾಸೆಗೂ ಇಲ್ಲಿ ವಿವರಣೆ ಇದೆ. ಎಲ್ಲರೂ ಸುಖವನ್ನು ಬಯಸುತ್ತಾರೆ. ಅದನ್ನು ಪೂರೈಸಿಕೊಳ್ಳಲು ಪ್ರತಿ ಕ್ಷಣವೂ ಪ್ರಯತ್ನ ಮಾಡುತ್ತಾರೆ. ಆದರೆ ನಿಜವಾದ ಮೋಕ್ಷ ಮಾರ್ಗದಲ್ಲಿ ಸಾಗುವವರ ಸಂಖ್ಯೆ ಕಡಿಮೆ. ಮೋಕ್ಷವನ್ನು ತಮ್ಮ ಜ್ಞಾನಕ್ಕೆ ತಕ್ಕಂತೆ ವ್ಯಾಖ್ಯಾನಿಸುವವರೇ ಹೆಚ್ಚು ಎಂದು ಹೇಳಿದರು.