ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ | villagers protest

ಸೊರಬ ತಾಲೂಕಿನ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಿಲ್ಲಿಸುವಂತೆ ಒತ್ತಾಯಿಸಿ ಮೂಗೂರು, ದ್ವಾರಹಳ್ಳಿ ಗ್ರಾಮಸ್ಥರು ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗಂಗಮಾಳಮ್ಮ,  ಜಿಲ್ಲಾ ಸಂಘಟನಾ ಸಂಚಾಲಕ ಪರಶುರಾಮ್, ಪರಿಮಳಾ, ಸುನೀತಾ, ವಿನುತಾ, ಸರೋಜಮ್ಮ ಇತರರಿದ್ದರು.
ಸೊರಬ ತಾಲೂಕಿನ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಿಲ್ಲಿಸುವಂತೆ ಒತ್ತಾಯಿಸಿ ಮೂಗೂರು, ದ್ವಾರಹಳ್ಳಿ ಗ್ರಾಮಸ್ಥರು ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗಂಗಮಾಳಮ್ಮ, ಜಿಲ್ಲಾ ಸಂಘಟನಾ ಸಂಚಾಲಕ ಪರಶುರಾಮ್, ಪರಿಮಳಾ, ಸುನೀತಾ, ವಿನುತಾ, ಸರೋಜಮ್ಮ ಇತರರಿದ್ದರು.
Published on
ಸೊರಬ: ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಮೂಗೂರು ಮತ್ತು ದ್ವಾರಹಳ್ಳಿ ಮಹಿಳೆಯರು ಸೋಮವಾರ ತಾಲೂಕು ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೆಲವರು ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಅಪ್ರಾಪ್ತರು, ವಿದ್ಯಾರ್ಥಿಗಳು, ಯುವಕರು ವ್ಯಸನಕ್ಕೆ ಒಳಗಾಗಿದ್ದಾರೆ. ಕೂಡಲೇ ಇಂತಹ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು.
ಅಕ್ರಮವಾಗಿ ಮದ್ಯ ಮಾರಾಟದಿಂದ ಗ್ರಾಮದಲ್ಲಿ ಹೆಣ್ಣು ಮಕ್ಕಳು ಓಡಾಡುವಂತಿಲ್ಲ. ಸಂಜೆ ಆಗುತ್ತಿದ್ದಂತೆ ಶಾಲೆ, ಅಂಗನವಾಡಿ ಆವರಣಗಳು ಮದ್ಯವ್ಯಸನಿಗಳಿಂದ ತುಂಬಿರುತ್ತವೆ. ಪುರುಷರು ಮನೆಯ ಕೆಲಸ ಬಿಟ್ಟು ಸದಾ ಮತ್ತಿನಲ್ಲಿ ಇರುತ್ತಾರೆ. ಮನೆಯಲ್ಲಿ ಭಯ, ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮವಾಗಿ ಮದ್ಯ ಮಾರುವವರಿಗೆ ಹಲವು ಬಾರಿ ಮನವಿ ಮಾಡಿದರೂ ದಂಧೆ ನಿಲ್ಲಿಸಿಲ್ಲ. ಇದು ಗೊತ್ತಿದ್ದರೂ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಪ್ರತಿ ತಿಂಗಳು ಮಾಮೂಲಿ ನೀಡುತ್ತೇವೆ. ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಉದ್ಧಟತನದಿಂದ ಮದ್ಯ ಮಾರಾಟಗಾರರು ವರ್ತಿಸುತ್ತಿದ್ದಾರೆ. ಕೂಡಲೇ ಕಾನೂನು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇ ಎಂದು ಎಚ್ಚರಿಸಿದರು.
ಡಿಎಸ್‌ಎಸ್ ಜಿಲ್ಲಾ ಮಹಿಳಾ ಸಂಚಾಲಕಿ ಗಂಗಮಾಳಮ್ಮ,  ಜಿಲ್ಲಾ ಸಂಘಟನಾ ಸಂಚಾಲಕ ಪರಶುರಾಮ್, ಪರಿಮಳಾ, ಸುನೀತಾ, ವಿನುತಾ, ಸರೋಜಮ್ಮ, ಗುತ್ಯಮ್ಮ, ರೇಣುಕಾ, ರೂಪಾ, ರಾಜಪ್ಪ, ಸುಮಲತಾ, ಸಂತೋಷ್, ಫಕ್ಕೀರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net