ಸಾಧಕರ ಸಂಭ್ರಮ ಕಾರ್ಯಕ್ರಮ 19ಕ್ಕೆ | Pressmeet

ಎನ್.ವಿ.ಈರೇಶ್
ಎನ್.ವಿ.ಈರೇಶ್
Published on
ಶಿಕಾರಿಪುರ: ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಶಿಕಾರಿಪುರದ ಈಶ್ವರ್ ಫೌಂಡೇಶನ್‌ನಿಂದ ಜು.19ರಂದು ಬೆಳಗ್ಗೆ 9ಕ್ಕೆ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ (ಎಸ್‌ಎಸ್ ರಸ್ತೆ) ‘ಸಾಧಕರ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಎನ್.ವಿ.ಈರೇಶ್ ಹೇಳಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ದುರ್ಗಪ್ಪ ಅಂಗಡಿ, ಮಾಜಿ ಸೈನಿಕ ಕೆ.ಎಚ್.ವೀರೇಶಯ್ಯ, ಸರ್ವೋತ್ತಮ ಪ್ರಶಸ್ತಿ ಪುರಸ್ಕೃತ ಡಾ. ಶ್ರೀನಿವಾಸ, ಅಂತಾರಾಷ್ಟ್ರೀಯ ಪಂಜ ಕುಸ್ತಿ ವಿಜೇತೆ ಗೌರಮ್ಮ, ಮಾಸ್ಟರ್ಸ್‌ ಈಜು ಸ್ಪರ್ಧೆ ವಿಜೇತ ಡಾ. ಎಂ.ರವಿ ಅವರಿಗೆ ಈಶ್ವರ್ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಐಎಎಸ್, ನೀಟ್, ಕೆಎಎಸ್, ಪಿಎಸ್‌ಐ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಯುವಜನರಿಗೆ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಜಿ.ಬಿ.ವಿನಯ್‌ಕುಮಾರ್, ಧಾರವಾಡದ ಮಹೇಶ್ ಮಾಸಾಳ್, ಶಿಕಾರಿಪುರದ ಬಿ.ಮಂಜುನಾಥ ಪಾಲ್ಗೊಳ್ಳುವರು ಎಂದು ಹೇಳಿದರು. ಹೊಸನಗರ ಮೂಲೆಗದ್ದೆ ಶ್ರೀ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಎಸ್.ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಬಿಇಒ ಕೆ.ಬಿ.ಲೋಕೇಶಪ್ಪ, ಶಿವಮೊಗ್ಗದ ಬಸವಸಂಗಮ ಅಧ್ಯಕ್ಷ ಚೇತನ್‌ಕುಮಾರ್, ಮಮತಾ ಈರೇಶ್ ಮತ್ತಿತರರು ಭಾಗವಹಿಸುವರು ಎಂದರು.
ಕುಮಾರಸ್ವಾಮಿ ಹಿರೇಮಠ, ಶಿವು ಸಂದಿಮನಿ, ಸಮೀರ್ ಸೈಯದ್, ಡಿ.ಡಿ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net