ರೋಟರಿ ಸೇವಾ ಕಾರ್ಯ ಶ್ಲಾಘನೀಯ

ತೀರ್ಥಹಳ್ಳಿ ತಾಲೂಕಿನ ಹಿಲಿಕೆರೆ ಸರ್ಕಾರಿ ಶಾಲೆ ವಿದ್ಯಾಥಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸಲಾಯಿತು. ರಮೇಶ್, ಕೆಪಿಎಸ್ ಸ್ವಾಮಿ, ನಂಜೇಗೌಡ, ಎಸ್.ನಾಗರಾಜ್ ಇತರರಿದ್ದರು.
ತೀರ್ಥಹಳ್ಳಿ ತಾಲೂಕಿನ ಹಿಲಿಕೆರೆ ಸರ್ಕಾರಿ ಶಾಲೆ ವಿದ್ಯಾಥಿಗಳಿಗೆ ಶೈಕ್ಷಣಿಕ ಪರಿಕರ ವಿತರಿಸಲಾಯಿತು. ರಮೇಶ್, ಕೆಪಿಎಸ್ ಸ್ವಾಮಿ, ನಂಜೇಗೌಡ, ಎಸ್.ನಾಗರಾಜ್ ಇತರರಿದ್ದರು.
Published on
ತೀರ್ಥಹಳ್ಳಿ: ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಕೊಡುಗೆಯು ಮುಖ್ಯ. ಶಿಕ್ಷಣ, ಆರೋಗ್ಯ ಸೇರಿ ಸಮುದಾಯ ಸೇವೆಯಲ್ಲಿ ರೋಟರಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ರೋಟರಿ ಕ್ಲಬ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿ, ದೇಶ ಪ್ರಗತಿಪಥದಲ್ಲಿ ಸಾಗಲು ಪ್ರತಿಯೊಬ್ಬ ಪ್ರಜೆಯ ಕೊಡುಗೆ ಅಗತ್ಯ. ಬಡವರ ಮಕ್ಕಳ ಮೇಲಿನ ಕಾಳಜಿಯಿಂದ ನಂಜೇಗೌಡ ಅವರು ಪ್ರತಿ ವರ್ಷ ಶೈಕ್ಷಣಿಕ ಪರಿಕರ ವಿತರಿಸುತ್ತಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ರಮೇಶ್ ಮಾತನಾಡಿ, ಕ್ಲಬ್ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿದ್ದು, ಈ ವರ್ಷ ಪಟ್ಟಣದ ಮುಕ್ತಿ ಟ್ರಸ್ಟ್‌ಗೆ ಒಂದು ವಾಹನ ನೀಡಲಾಗುತ್ತಿದೆ. ದಾನಿ ನಂಜೇಗೌಡರು ವಾಹನದ ವೆಚ್ಚ ಭರಿಸುವರು ಎಂದರು.
ರೋಟರಿ ಸದಸ್ಯ ಕೆಪಿಎಸ್ ಸ್ವಾಮಿ ಮಾತನಾಡಿ, ದಾನಿ ನಂಜೆಗೌಡರ ನೆರವಿನಿಂದ ತಾಲೂಕಿನ ದೇವಂಗಿ, ಹಿಲಿಕೆರೆ, ಬಳಗಟ್ಟೆ, ಶೀರೂರು ಜಾವಗಲ್ ಹಾಗೂ ಮಲ್ಲಂದೂರಿನ ಸರ್ಕಾರಿ ಶಾಲೆಗಳಿಗೆ ಒಂದು ಸಾವಿರಕ್ಕೂ ಅಧಿಕ್ ನೋಟ್‌ಬುಕ್ ಮತ್ತು ಸ್ಕೂಲ್ ಬ್ಯಾಗ್, ಜ್ಯಾಮಿಟ್ರಿ ಬಾಕ್ಸ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ದೇವಂಗಿ ಮನೆತನ ಕಿರುಚಿತ್ರ ಬಿಡುಗಡೆ ಮಾಡಲಾಯಿತು. ನಂಜೇಗೌಡ, ರೋಟರಿ ಜಿಲ್ಲೆ ಸಹಾಯಕ ಗೌರ್ನರ್ ಎಸ್.ನಾಗರಾಜ್, ಚಿತ್ರ ನಿರ್ದೇಶಕ ಹುಲಿ ಚಂದ್ರಶೇಖರ್, ರೋಟರಿ ಕಾರ್ಯದರ್ಶಿ ಸಂಜಯ್, ಇನ್ನರ್‌ವ್ಹೀಲ್ ಅಧ್ಯಕ್ಷೆ ಭವಾನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net