ಅರಳಿಕೊಪ್ಪದಲ್ಲಿ ಯುವಕರಿಂದಲೇ ರಸ್ತೆ ದುರಸ್ತಿ

ಹೊಸನಗರ ತಾಲೂಕಿನ ಅರಳಿಕೊಪ್ಪ ದೇವಸ್ಥಾನ ರಸ್ತೆಯನ್ನು ದುರಸ್ತಿ ಮಾಡುತ್ತಿರುವುದು.
ಹೊಸನಗರ ತಾಲೂಕಿನ ಅರಳಿಕೊಪ್ಪ ದೇವಸ್ಥಾನ ರಸ್ತೆಯನ್ನು ದುರಸ್ತಿ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಅನುದಾನ ಮೀಸಲಿಟ್ಟರೂ ಕಾಮಗಾರಿ ಈವರೆಗೆ ಮರೀಚಿಕೆ
  • ಹೊಸನಗರ ತಾಲೂಕಿನ ಅರಳಿಕೊಪ್ಪ- ಎಂ.ಗುಡ್ಡೇಕೊಪ್ಪ ಗ್ರಾಮ
  • ಅರಳಿಕೊಪ್ಪದಲ್ಲಿ ಯುವಕರಿಂದಲೇ ರಸ್ತೆ ದುರಸ್ತಿ
ಹೊಸನಗರ: ತಾಲೂಕಿನ ಅರಳಿಕೊಪ್ಪ ಹಾಗೂ ಎಂ.ಗುಡ್ಡೇಕೊಪ್ಪ ಗ್ರಾಮದ ಬಸವಣ್ಣ ದೇವಸ್ಥಾನ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ಮನವಿ ಸಲ್ಲಿಸಿದರೂ ಪ್ರಯೋಜನ ಆಗದ ಕಾರಣ ಸ್ಥಳಿಯ ಯುವಕರೇ ದುರಸ್ತಿಗೆ ಮುಂದಾಗಿ ಗಮನಸೆಳೆದಿದ್ದಾರೆ.
ದೇವಸ್ಥಾನದ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ಭಾಗದಲ್ಲಿ ನೂರಾರು ಕೃಷಿ ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಮಕ್ಕಳು ಶಾಲೆ, ಕಾಲೇಜಿಗೆ ತೆರಳಲು ಅನಾನುಕೂಲವಾಗಿದೆ. ಅನಾರೋಗ್ಯ ಪೀಡಿತರು, ವಯೋವೃದ್ಧರು ರಸ್ತೆಯಲ್ಲಿ ಸಂಚರಿಸುವುದೇ ಕಷ್ಟ. ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಒಗ್ಗೂಡಿ ಬರೀ ಹೊಂಡ, ಗುಂಡಿಗಳೇ ಇದ್ದ ರಸ್ತೆ ದುರಸ್ತಿ ಮಾಡಿದ್ದಾರೆ. ಟಿಪ್ಪರ್​, ಟ್ರಾಕ್ಟರ್​ ಬಳಸಿ ಗುಂಡಿಗಳಿಗೆ ಮಣ್ಣು, ಜಲ್ಲಿ ತುಂಬಿ ಮಳೆನೀರು ನಿಲ್ಲದಂತೆ ಮಾಡಿದ್ದಾರೆ. ಈ ರಸ್ತೆ ದುರಸ್ತಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಶಾಸಕರ ೇತ್ರಾಭಿವೃದ್ಧಿ ನಿಧಿಯಿಂದ 9.75ಲ ಅನುದಾನ ಮೀಸಲಿಟ್ಟರೂ ಕಾಮಗಾರಿ ಈವರೆಗೆ ಮರೀಚಿಕೆಯಾಗಿದೆ ಎಂದು ಯುವಕರು ಆರೋಪಿಸಿದ್ದಾರೆ. ರಸ್ತೆ ದುರಸ್ತಿ ಕಾರ್ಯದಲ್ಲಿ ಸತೀಶ್​, ಅಶೋಕ, ನಿಶ್ಚಿತ್​, ಟಾಕಪ್ಪ, ಗಂಗಾಧರ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net