ಸಾಂಸ್ಕೃತಿಕ ಕಾರ್ಯಕ್ರಮದಿಂದ ಊರಿಗೆ ಸಿರಿವಂತಿಕೆ | award

ಸಾಗರದಲ್ಲಿ ಆಯೋಜಿಸಿದ್ದ ರಜತ ಸಾಗರೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.  ಶ್ರೀ ಮಹೇಶ್ವರ ಶಿವಾಚಾರ್ಯರು, ಅಶ್ವಿನಿಕುಮಾರ್, ಎಚ್.ಎನ್.ಮಹೇಶ್ ಹುಲ್ಕುಳಿ, ಮಹಾಬಲೇಶ್ವರ ಹೆಗಡೆ ಇತರರಿದ್ದರು.
ಸಾಗರದಲ್ಲಿ ಆಯೋಜಿಸಿದ್ದ ರಜತ ಸಾಗರೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಮಹೇಶ್ವರ ಶಿವಾಚಾರ್ಯರು, ಅಶ್ವಿನಿಕುಮಾರ್, ಎಚ್.ಎನ್.ಮಹೇಶ್ ಹುಲ್ಕುಳಿ, ಮಹಾಬಲೇಶ್ವರ ಹೆಗಡೆ ಇತರರಿದ್ದರು.
Published on
ಸಾಗರ: ಊರು ಆರೋಗ್ಯಕರವಾಗಿ ಇರಬೇಕಾದರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತಿರಬೇಕು ಎಂದು ಸಾಗರದ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ಸಾಗರದ ನಗರಸಭೆ ರಂಗಮಂದಿರದಲ್ಲಿ ಸಹೃದಯ ಬಳಗದದಿಂದ ಏರ್ಪಡಿಸಿದ್ದ ರಜತ ಸಾಗರೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದ ವಿವಿಧೆಡೆ ಎಲೆಮರೆಯ ಕಾಯಿಯಂತೆ ಇದ್ದು, ಕೆಲಸ ಮಾಡುತ್ತಿರುವವರನ್ನು ಕರೆತಂದು ಸನ್ಮಾನಿಸುವ ಕೆಲಸ ಅನುಕರಣೀಯ. ಇಂತಹ ಕಾರ್ಯಕ್ರಮಗಳು ಊರಿನ ಸಾಂಸ್ಕೃತಿಕ ಸಿರಿ ಹೆಚ್ಚಿಸುತ್ತವೆ ಎಂದರು.
ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎನ್.ಮಹೇಶ್ ಹುಲ್ಕುಳಿ ಮಾತನಾಡಿ, ಎಲ್ಲ ಸಹೃದಯತೆ ಇರುತ್ತದೆಯೋ ಅಲ್ಲಿ ಒಳ್ಳೆಯತನ ಇರುತ್ತದೆ. ಸಾಧಕರ ಜತೆ ಅತಿಹೆಚ್ಚು ಕಾಲ ಕೆಲಸ ಮಾಡುತ್ತಿರುವ ಸಹಕಾರ ಸಂಸ್ಥೆಯನ್ನು ಸನ್ಮಾನಿಸುತ್ತಿರುವುದು ಅಭಿನಂದನಾರ್ಹ ಕೆಲಸ ಎಂದರು.
ರಾಜೇಶ ಮತ್ತು ವಿನಯ ದೇವರಾಜ್ ಅವರಿಂದ ಸುಗಮ ಸಂಗೀತ, ಕರ್ನಾಟಕ ಜಾನಪದ ಪರಿಷತ್‌ನಿಂದ ಗಾಯನ, ಪರಿಣಿತಿ ಕಲಾಕೇಂದ್ರದಿಂದ ಜಾನಪದ ನೃತ್ಯ, ಆದ್ಯ ಅವರಿಂದ ಭರತನಾಟ್ಯ, ವಿದುಷಿ ಮೇಘನಾ ರಾವ್ ತಂಡದಿಂದ ಭರತನಾಟ್ಯ, ಮಿಮಿಕ್ರಿ ದಯಾನಂದ್, ಉಮೇಶ್ ಗೌಡ ಅವರಿಂದ ನಗೆಹಬ್ಬ, ಪ್ರಹ್ಲಾದ್ ಆಚಾರ್ಯ ಅವರಿಂದ ನೆರಳು-ಬೆಳಕಿನಾಟ ನಡೆಯಿತು.
ಕೆಳದಿ ರಾಜಗುರು ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಟಾಕಪ್ಪ, ಜಿ.ಪರಮೇಶ್ವರಪ್ಪ, ಬಳಗದ ಅಧ್ಯಕ್ಷ ಜಿ.ನಾಗೇಶ್, ಕೆ.ಎಸ್.ಪ್ರಶಾಂತ್, ಸುಧೀರ್ ಶೆಟ್ಟಿ  ಲೋಕೇಶ್‌ಕುಮಾರ್, ಡಾ. ಕೆಳದಿ ವೆಂಕಟೇಶ್ ಜೋಯಿಸ್. ವಿ.ಟಿ.ಸ್ವಾಮಿ, ಮಾಲತೇಶಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net