ಸಮ್ಮೇಳನದ ಅಧ್ಯಕ್ಷತೆ ಹೊಣೆ ಹೆಚ್ಚಿಸಿದೆ | sahitya sammelana

ಶಿಕಾರಿಪುರ ತಾಲೂಕು ಶರಣ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸುಭಾಷ್‌ಚಂದ್ರ ಸ್ಥಾನಿಕ್ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಶಶಿಧರ್‌ಸ್ವಾಮಿ, ಮಹಾರುದ್ರ, ಜಗದೀಶ್, ಮಂಜುನಾಥ್ ಇತರರಿದ್ದರು.
ಶಿಕಾರಿಪುರ ತಾಲೂಕು ಶರಣ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸುಭಾಷ್‌ಚಂದ್ರ ಸ್ಥಾನಿಕ್ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಶಶಿಧರ್‌ಸ್ವಾಮಿ, ಮಹಾರುದ್ರ, ಜಗದೀಶ್, ಮಂಜುನಾಥ್ ಇತರರಿದ್ದರು.
Published on
ಶಿಕಾರಿಪುರ: ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಶಿಕ್ಷಕ ಸುಭಾಷ್‌ಚಂದ್ರ ಸ್ಥಾನಿಕ್ ಅವರ ಮನೆಗೆ ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಪದಾಧಿಕಾರಿಗಳು ಹೋಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ನಿಯೋಜಿತ ಸರ್ವಾಧ್ಯಕ್ಷ ಸುಭಾಷ್‌ಚಂದ್ರ ಸ್ಥಾನಿಕ್ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷನಾಗಿ ಆಯ್ಕೆ ಮಾಡಿರುವುದು ನನ್ನ ಭಾಗ್ಯ.ನನ್ನ ಸೇವೆಯನ್ನು ಪರಿಗಣಿಸಿ ಶರಣ ಸಾಹಿತ್ಯ ಪರಿಷತ್ ನನಗೆ ಈ ಅವಕಾಶ ಕಲ್ಪಿಸಿದೆ. ಇದರಿಂದ ನನ್ನ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೆಚ್ಚಾಗಿದೆ ಎಂದರು.
ಪರಿಷತ್ ತಾಲೂಕು ಅಧ್ಯಕ್ಷ  ಕಣಿವೆಮನೆ ಶಶಿಧರ್‌ಸ್ವಾಮಿ ಮಾತನಾಡಿ, ಶರಣರ ಚಿಂತನೆ, ಆಶಯಗಳನ್ನು ಜನಮನಕ್ಕೆ ತಲುಪಿಸುವ ನಿಟ್ಟಿನಲ್ಲಿ ಮತ್ತು ಶರಣ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಕಳೆದ ಆರು ವರ್ಷಗಳಿಂದ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹಾರುದ್ರ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅಂಗಡಿ ಜಗದೀಶ್, ಬೇಗೂರು ಮಂಜುನಾಥ್, ಎಚ್.ಜಿ.ಮೃತ್ಯುಂಜಯ, ರೈತ ಸಂಘದ ಪ್ಯಾಟಿ ಈರಣ್ಣ, ಹುಲಿಕೆರೆ ವೀರೇಶ್, ನಾಗರಾಜ್, ಮಹೇಶ್, ಬಾಲಚಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net