ಶಿಕ್ಷಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನ

ಸಾಗರದ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ನಾರಾಯಣಮೂರ್ತಿ ಕಾನುಗೋಡು ಅವರನ್ನು ಸನ್ಮಾನಿಸಲಾಯಿತು. ಅಶ್ವಿನಿ ಕುಮಾರ್, ದಿನೇಶ್‌ಕುಮಾರ್ ಜೋಶಿ ಇತರರಿದ್ದರು.
ಸಾಗರದ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ನಾರಾಯಣಮೂರ್ತಿ ಕಾನುಗೋಡು ಅವರನ್ನು ಸನ್ಮಾನಿಸಲಾಯಿತು. ಅಶ್ವಿನಿ ಕುಮಾರ್, ದಿನೇಶ್‌ಕುಮಾರ್ ಜೋಶಿ ಇತರರಿದ್ದರು.
Published on
ಸಾಗರ: ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸುವವರು ಶಿಕ್ಷಕರು. ಸ್ವಾರ್ಥವಿಲ್ಲದ ಶಿಕ್ಷಕರ ಸೇವೆಯನ್ನು ಸಮಾಜ ಸದಾ ಗುರುತಿಸುತ್ತದೆ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ನಾರಾಯಣಮೂರ್ತಿ ಅವರಿಗೆ 70 ವರ್ಷ ಹಿನ್ನೆಲೆಯಲ್ಲಿ ಅವರ ಸ್ನೇಹಿತರ ಬಳಗದಿಂದ ಸಾಗರದ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾರಾಯಣಮೂರ್ತಿ ಅವರ ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ನಾರಾಯಣಮೂರ್ತಿ ಅವರು ಶಿಕ್ಷಕರಾಗಿ ಶೈಕ್ಷಣಿಕ ಸೇವೆ ಮಾಡುವ ಜತೆ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದ್ದರು. ಅವರ ಜನಮುಖಿ ಮತ್ತು ಸಮಾಜಮುಖಿ ಕಾರ್ಯ ಯುವಜನರಿಗೆ ಸ್ಫೂರ್ತಿ ಎಂದರು.
ಸಾಮಾಜಿಕ ಕಾರ್ಯಕರ್ತ ಅಬಸೆ ದಿನೇಶಕುಮಾರ್ ಎನ್.ಜೋಷಿ ಮಾತನಾಡಿ, ನಾರಾಯಣಮೂರ್ತಿ ಅವರದ್ದು ಅಪರೂಪದ ವ್ಯಕ್ತಿತ್ವ. ಎಲ್ಲರೊಡನೆ ಬೆರೆಯುವ ವಿಶೇಷ ಗುಣ ಅವರಲ್ಲಿದೆ. ಒಳ್ಳೆಯ ಕೆಲಸ ಮಾಡಬೇಕು ಎಂದು ಸಂಕಲ್ಪ ತೊಟ್ಟು ಹೊರಟಾಗ ಎಂತಹ ಸವಾಲು ಬಂದರೂ ಅದನ್ನು ಎದುರಿಸಿ ಕಾರ್ಯಸಿದ್ಧಿಗೊಳಿಸುವ ಶಕ್ತಿ ಅವರಲ್ಲಿದೆ ಎಂದು ಹೇಳಿದರು.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ನಾರಾಯಣಮೂರ್ತಿ ಅವರು ಕೈಗೆತ್ತಿಕೊಂಡ ಪ್ರತಿಯೊಂದು ಕೆಲಸದಲ್ಲೂ ಹೊಸತನ ಇರುತಿತ್ತು. ಕಾರ್ಯಕ್ರಮವನ್ನು ಹೇಗೆ ಸಂಘಟಿಸಬೇಕು, ಹೇಗೆ ಯಶಸ್ವಿಗೊಳಿಸಬೇಕು ಎನ್ನುವುದನ್ನು ಅವರಿಂದ ಕಲಿಯಬೇಕು ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾರಾಯಣ ಮೂರ್ತಿ ಕಾನುಗೋಡು, ಶಿಸ್ತು ಮತ್ತು ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ರಾಷ್ಟಿಯ ಸ್ವಯಂ ಸೇವಕ ಸಂಘ. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ತತ್ವವನ್ನು ತಂದೆ ಹೇಳಿಕೊಟ್ಟಿದ್ದರು. ಅದನ್ನು ನಾನು ಇಂದಿಗೂ ಅಕ್ಷರಶಃ ಪಾಲಿಸುತ್ತಿದ್ದೇನೆ. ಬಡತನದ ನಡುವೆಯೂ ನಮ್ಮ ಪಾಲಕರು ಉತ್ತಮ ಸಂಸ್ಕಾರ ನೀಡಿ ಸಮಾಜದಲ್ಲಿ ಹೇಗೆ ಮಾದರಿಯಾಗಿ ಬದುಕಬೇಕು ಎನ್ನುವುದನ್ನು ಹೇಳಿ ಕೊಟ್ಟಿದ್ದು ನನಗೆ ಮಾರ್ಗದರ್ಶನವಾಗಿದೆ ಎಂದರು.
ಗಣೇಶ್ ಪ್ರಸಾದ್, ಸುಧೀರ್ ಶೆಟ್ಟಿ, ಡಾ. ಪ್ರಸನ್ನ, ಕವಲಕೋಡು ವೆಂಕಟೇಶ್, ಗೋಪಾಲ ಸಿಂಗ್, ಅನುಷಾ, ಮಾನಸಾ, ಮ.ಸ.ನಂಜುಂಡಸ್ವಾಮಿ, ಐ.ವಿ.ಹೆಗಡೆ, ಶೇಷಗಿರಿ ಹೆಗಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net