ರಾಜೀನಾಮೆಯಿಂದ ಅಹಿಂದ ವರ್ಗಕ್ಕೆ ಹಿನ್ನಡೆ

ಸಚಿನ್​ ಗರಗ
ಸಚಿನ್​ ಗರಗ
Published on

ಪ್ರಮುಖ ಮುಖ್ಯಾಂಶಗಳು

  • ಮಲೆನಾಡು ಅಹಿಂದ ಸಂಘಟನೆಅಧ್ಯಕ್ಷ ಸಚಿನ್​ ಗರಗ ಹೇಳಿಕೆ
  • ರಾಜೀನಾಮೆಯಿಂದ ಅಹಿಂದ ವರ್ಗಕ್ಕೆ ಹಿನ್ನಡೆ
ತೀರ್ಥಹಳ್ಳಿ: ಅಹಿಂದ ಸಮುದಾಯದ ಪ್ರಶ್ನಾತಿತ ನಾಯಕರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಅಹಿಂದ ವರ್ಗಕ್ಕೆ ಹಿನ್ನಡೆಯಾಗಿದ್ದು, ಮುಂದೇನು ಎಂಬ ಚಿಂತೆ ಎದುರಾಗಿದೆ ಎಂದು ಮಲೆನಾಡು ಅಹಿಂದ ಸಂಘಟನೆಅಧ್ಯಕ್ಷ ಸಚಿನ್​ ಗರಗ ಹೇಳಿದರು.
ಒಡಂಬಡಿಕೆಯಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದು ಅವರ ಪನಿಷ್ಠೆ ಮತ್ತು ಬದ್ಧತೆಗೆ ಸಾ. ದೇವರಾಜ ಅರಸು ನಂತರದಲ್ಲಿ ಸಮಾಜದ ತಳ ಸಮುದಾಯದ ಹಿತಕ್ಕೆ ಪೂರಕವಾಗಿ ಶ್ರಮಿಸಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಬಡವರ ಪರ ಸೇವೆ ಸ್ಮರಣೀಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿದ್ದರಾಮಯ್ಯ ಆಶಯ ಮುಂದುವರಿಸಿಕೊಂಡು ಹೋಗುವ ಸಲುವಾಗಿಯೇ ಸ್ಥಾಪನೆಗೊಂಡಿರುವ ಮಲೆನಾಡು ಅಹಿಂದ ಸಂಟನೆಗೆ ಅವರೇ ಸ್ಫೂರ್ತಿಯಾಗಿದ್ದಾರೆ. ಸಂಟನೆ ಅಹಿಂದ ಸಮುದಾಯದ ಸಾಮಾಜಿಕ, ಶೈಣಿಕ ಅಭಿವೃದ್ಧಿಗೆ ಆದ್ಯತೆ ನೀಡಲಿದೆ ಎಂದರು.
ಸಂಘಟನೆ ಗೌರವಾಧ್ಯಕ್ಷ ಶ್ರೀಧರಮೂರ್ತಿ, ವಾಸಪ್ಪ, ಮಂಜುನಾಥ್​, ಪುತ್ತಬ್ಬ, ರವಿ, ಅಬೂಬಕರ್​, ಪ್ರಶಾಂತ್​, ರಮೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net