ಲಾರಿಗಳ ಎಫ್‌ಸಿ ಶುಲ್ಕ ಇಳಿಸಲು ಮನವಿ I fc fees

ಲಾರಿಗಳ ಎಫ್‌ಸಿ ಹಾಗೂ ಆರ್‌ಸಿ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ಲಾರಿ ಮಾಲೀಕರ ಸಂಘದಿಂದ ಎಡಿಸಿ ವಿ.ಅಭಿಷೇಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್.ಎಸ್.ಜ್ಯೋತಿಪ್ರಕಾಶ್, ತಲ್ಕಿನ್ ಅಹಮದ್, ಕೆ.ಎನ್.ಭೋಜರಾಜ್, ಯಶವಂತಕುಮಾರ್, ವೈ.ಎಚ್.ನಾಗರಾಜ್ ಇದ್ದರು.
ಲಾರಿಗಳ ಎಫ್‌ಸಿ ಹಾಗೂ ಆರ್‌ಸಿ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ಲಾರಿ ಮಾಲೀಕರ ಸಂಘದಿಂದ ಎಡಿಸಿ ವಿ.ಅಭಿಷೇಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್.ಎಸ್.ಜ್ಯೋತಿಪ್ರಕಾಶ್, ತಲ್ಕಿನ್ ಅಹಮದ್, ಕೆ.ಎನ್.ಭೋಜರಾಜ್, ಯಶವಂತಕುಮಾರ್, ವೈ.ಎಚ್.ನಾಗರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 28 ಸಾವಿರ ರೂ.ಗೆ ಏರಿಕೆ ಅಧಿಕ ಹೊರೆ
  • ಅವಧಿ ಮುಗಿದ ಟೋಲ್ ತೆರವುಗೊಳಿಸಿ
  • ಮಾಲೀಕರ ಸಂಘದ ಆಗ್ರಹ
ಶಿವಮೊಗ್ಗ: ಲಾರಿಗಳ ಎಫ್‌ಸಿ ಮತ್ತು ಆರ್‌ಸಿಗಳ ಶುಲ್ಕ ಏರಿಕೆ ಆದೇಶವನ್ನು ಕೇಂದ್ರ (central) ಹಾಗೂ ರಾಜ್ಯ (state) ಸರ್ಕಾರಗಳು ಕೂಡಲೇ ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಲಾರಿ (lorry) ಮಾಲೀಕರ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಹಿಂದೆ ಲಾರಿಗಳ ಎಫ್‌ಸಿ ಮತ್ತು ಆರ್‌ಸಿಗಳ ಶುಲ್ಕ 1,400 ರೂ. ಇತ್ತು. ಈಗ 20 ವರ್ಷ ಮೇಲ್ಪಟ್ಟ ವಾಹನಗಳಿಗೆ 28 ಸಾವಿರ ರೂ.ಗೆ ಏರಿಸಲಾಗಿದೆ. ಇದರಿಂದ ಲಾರಿ ಮಾಲೀಕರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಇಷ್ಟು ಮೊತ್ತವನ್ನು ಭರಿಸಲು ಲಾರಿ ಮಾಲೀಕರಿಂದ ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಲಾರಿ ಮಾಲೀಕರು ಮೂರು ತಿಂಗಳಿಗೊಮ್ಮೆ ರಸ್ತೆ ತೆರಿಗೆ, ವಿಮೆ, ಪರವಾನಗಿ, ಟೋಲ್ ಶುಲ್ಕದ ಜತೆಗೆ ವಾಹನದ ನಿರ್ವಹಣೆಗೆ ಸಾಕಷ್ಟು ಹಣ ವ್ಯಯವಾಗುತ್ತಿದೆ. ಸಂಪಾದನೆಗಿಂತ ಖರ್ಚು ಹೆಚ್ಚಾಗುತ್ತಿದೆ. ಈಗ ಗಾಯದ ಮೇಲೆ ಬರೆ ಎಳೆದಂತೆ ಆರ್‌ಸಿ ಹಾಗೂ ಎಫ್‌ಸಿ ಶುಲ್ಕವನ್ನು ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 300 ಲಾರಿಗಳು ನಷ್ಟಕ್ಕೊಳಗಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗಮನಕ್ಕೆ ತಂದರು.
ಸ್ವಂತ ಲಾರಿ ಹೊಂದಿ ಚಾಲಕರೂ ಆಗಿರುವ ಲಾರಿ ಮಾಲಿಕರಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಏರಿಕೆ ಮಾಡಿರುವ 28 ಸಾವಿರ ರೂ. ಶುಲ್ಕವನ್ನು 1,400 ರೂ.ಗೆ ಇಳಿಸಬೇಕು. ಈಗಿನ ಆದೇಶವನ್ನು ವಾಪಸ್ ಪಡೆಯಬೇಕು. ಇತರೆ ರಾಜ್ಯಗಳಲ್ಲಿ ಕಾಲಾವಧಿ ಮುಗಿದ ಟೋಲ್‌ಗಳನ್ನು ತೆಗೆದು ಹಾಕಲಾಗಿದೆ. ನಮ್ಮ ರಾಜ್ಯದಲ್ಲೂ ಇಂತಹ ಟೋಲ್‌ಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಲಾರಿ ಮಾಲೀಕರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಎಸ್.ಎಸ್.ಜ್ಯೋತಿಪ್ರಕಾಶ್, ತಲ್ಕೀನ್ ಅಹಮದ್, ಅಧ್ಯಕ್ಷ ಕೆ.ಎನ್.ಭೋಜರಾಜ್, ಕಾರ್ಯಾಧ್ಯಕ್ಷ ವೈ.ಎಚ್.ನಾಗರಾಜ್, ಉಪಾಧ್ಯಕ್ಷ ಯಶವಂತಕುಮಾರ್, ಕಾರ್ಯದರ್ಶಿ ಎಂ.ಡಿ.ಸಮೀರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net