ಶಿವಮೊಗ್ಗದಲ್ಲೇ ಪೀಠ ಸ್ಥಾಪನೆ ಮಾಡಲು ಸಿಎಂಗೆ ಮನವಿ | High Court Mobile Bench

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಶಿಫಾರಸು ಮಾಡುವಂತೆ ಸಚಿವ ಮಧು ಬಂಗಾರಪ್ಪ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ಕೆ.ಬಸಪ್ಪಗೌಡ, ಜಿ.ಆರ್.ರಾಘವೇಂದ್ರ, ಕೆ.ಪಿ.ಶ್ರೀಪಾಲ, ಲಕ್ಷ್ಮೀಕಾಂತ ಚಿಮನೂರು, ಶ್ರೀನಿವಾಸ ಇತರರಿದ್ದರು.
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಶಿಫಾರಸು ಮಾಡುವಂತೆ ಸಚಿವ ಮಧು ಬಂಗಾರಪ್ಪ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ಕೆ.ಬಸಪ್ಪಗೌಡ, ಜಿ.ಆರ್.ರಾಘವೇಂದ್ರ, ಕೆ.ಪಿ.ಶ್ರೀಪಾಲ, ಲಕ್ಷ್ಮೀಕಾಂತ ಚಿಮನೂರು, ಶ್ರೀನಿವಾಸ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ವಕೀಲರ ಸಂಘದ ನಿಯೋಗದಿಂದ ಒತ್ತಾಯ
  • ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಿಯೋಗ
  • ನ್ಯಾ.ಜಸ್ವಂತ್ ಸಿಂಗ್ ಸಮಿತಿ ಸೂಚಿಸಿದ ಸೂತ್ರಗಳಲ್ಲೂ ಮುಂಚೂಣಿ
ಶಿವಮೊಗ್ಗ: ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ(High Court Mobile Bench) ಸ್ಥಾಪನೆ ಮಾಡಲು ಶಿಫಾರಸು ಮಾಡುವಂತೆ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಿಯೋಗ ತೆರಳಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ಅವರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ಮತ್ತು ಧಾರವಾಡದಲ್ಲಿ ಸಂಚಾರಿ ಪೀಠ ಸ್ಥಾಪಿಸಲಾಗಿದೆ. ಮಧ್ಯ ಕರ್ನಾಟಕ ಭಾಗದ ಶಿವಮೊಗ್ಗದಲ್ಲಿ ಸ್ಥಾಪನೆಯಾದರೆ ದಾವಣಗೆರೆ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರ್ಪಡೆಯಾಗಲಿವೆ. ನ್ಯಾಯಮೂರ್ತಿ ಜಸ್ವಂತ್ ಸಿಂಗ್(Justice Jaswant Singh) ಸಮಿತಿ ಸೂಚಿಸಿದ ಎಲ್ಲ ಸೂತ್ರಗಳಲ್ಲೂ ಮಧ್ಯ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಮನವರಿಕೆ ಮಾಡಿಕೊಟ್ಟರು. 
ಈಗಾಗಲೇ ಮಂಗಳೂರಿನಲ್ಲಿ ಕರಾವಳಿ(Karavali) ಸಂಚಾರಿ ಪೀಠವಾಗಿ ಮಂಗಳೂರಿನಲ್ಲಿ ಸ್ಥಾಪನೆಗಾಗಿ ಬೇಡಿಕೆ ಇಟ್ಟದ್ದು ಗಮನಕ್ಕಿದೆ. ಹಾಗಾಗಿ ಎಲ್ಲ ವಸ್ತುಸ್ಥಿತಿ, ಜನಾಭಿಪ್ರಾಯ, ಜನಪ್ರತಿನಿಧಿಗಳ ಅಭಿಪ್ರಾಯ, ಅಂಕಿಅಂಶಗಳು, ಈ ಎಲ್ಲ ಅಂಶಗಳ ಬಗ್ಗೆ ಸಾರ್ವಜನಿಕ ಚರ್ಚೆ, ಇವ್ಯಾವೂ ಆಗದೆ ತೀರ್ಮಾನ ತೆಗೆದುಕೊಳ್ಳಬಾರದು. ನಮ್ಮ ಬೇಡಿಕೆಯನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಮನವಿ ಮಾಡಿದರು.
 ಹಿರಿಯ ವಕೀಲರಾದ ಕೆ.ಬಸಪ್ಪಗೌಡ, ಜಿ.ಆರ್.ರಾಘವೇಂದ್ರ, ಕೆ.ಪಿ.ಶ್ರೀಪಾಲ, ಲಕ್ಷ್ಮೀಕಾಂತ ಚಿಮನೂರು, ಶ್ರೀನಿವಾಸ, ಹೈಕೋರ್ಟ್ ವಕೀಲರಾದ ಹರೀಶ್, ಪ್ರಕಾಶ್, ಚಂದ್ರಕಾಂತ್ ಪಾಟೀಲ್, ಅನಿತಾ ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net