ಮದರ್ ತೆರೇಸಾ ನಾಮಫಲಕ ತೆರವುಗೊಳಿಸಿ | Protest

ಭದ್ರಾವತಿ ಶಿವನಿ ವೃತ್ತದಲ್ಲಿ ಅಳವಡಿಸಿರುವ ಮದರ್ ತೆರೇಸಾ ವೃತ್ತ ಎಂಬ ನಾಮಫಲಕವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಪೌರಾಯುಕ್ತ ಕೆ.ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು. ಚಂದ್ರು, ಭಾನುಪ್ರಕಾಶ್, ವೇಲು, ಮುನಿರಾಜ್ ಗುರೂಜಿ ಇತರರಿದ್ದರು.
ಭದ್ರಾವತಿ ಶಿವನಿ ವೃತ್ತದಲ್ಲಿ ಅಳವಡಿಸಿರುವ ಮದರ್ ತೆರೇಸಾ ವೃತ್ತ ಎಂಬ ನಾಮಫಲಕವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಪೌರಾಯುಕ್ತ ಕೆ.ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು. ಚಂದ್ರು, ಭಾನುಪ್ರಕಾಶ್, ವೇಲು, ಮುನಿರಾಜ್ ಗುರೂಜಿ ಇತರರಿದ್ದರು.
Published on
ಭದ್ರಾವತಿ: ನಗರದ ತರೀಕೆರೆ ರಸ್ತೆಯಲ್ಲಿರುವ ಶಿವನಿ ವೃತ್ತಕ್ಕೆ ಮದರ್ ತೆರೇಸಾ ಎಂಬ ನಾಮಫಲಕವನ್ನು ಅನಾವರಣ ಮಾಡಿರುವುದನ್ನು ಖಂಡಿಸಿ ಶಿವನಿ ರಸ್ತೆ, ಉದ್ಧಾಮ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಗುಡ್ಡದ ಕೆಂಚಮ್ಮ ದೇವಸ್ಥಾನದ ಭಕ್ತರು, ಸ್ಥಳೀಯ ನಾಗರಿಕರು ಸೋಮವಾರ ಪ್ರತಿಭಟನೆ ನಡೆಸಿದರು.
ಶಿವನಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ನಂತರ ನಗರಸಭೆ ಕಚೇರಿವರೆಗೂ ಮೆರವಣಿಗೆ  ನಡೆಸಿದರು. ನಾಮಫಲಕ ತೆರವುಗೊಳಿಸುವಂತೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಕಳೆದ 50-60 ವರ್ಷಗಳಿಂದ ಶಿವನಿ ಕ್ರಾಸ್ ಎಂದೇ ಕರೆಯಲ್ಪಡುತ್ತಿದ್ದ ವೃತ್ತಕ್ಕೆ ಕಳೆದೆರಡು ದಿನಗಳ ಹಿಂದೆ ನಗರಸಭೆ ಅಧಿಕಾರಿಗಳು ಸ್ಥಳೀಯರಿಂದ ಮಾಹಿತಿ ಪಡೆಯದೆ ಮದರ್ ತೆರೇಸಾ ಎಂಬ ಹೆಸರಿನ ನಾಮಫಲಕ ಅಳವಡಿಸಿರುವುದು ಖಂಡನೀಯ. ಆ ಭಾಗದಲ್ಲಿ ಯಾವುದೇ ಚರ್ಚ್‌ಗಳು ಅಥವಾ ಕ್ರೈಸ್ತ ಸಮುದಾಯಕ್ಕೆ ಸೇರಿದ ಮನೆಗಳು ಇಲ್ಲ. ನಗರಸಭೆ ಆಡಳಿತ ದಿಢೀರ್ ತೀರ್ಮಾನ ತೆಗೆದುಕೊಂಡು ಮದರ್ ತೆರೇಸಾ ರಸ್ತೆ ಎಂದು ನಾಮಫಲಕ ಅನಾವರಣಗೊಳಿಸಿದ್ದಾರೆ ಎಂದು ದೂರಿದರು.
ಮನವಿಯನ್ನು ಸ್ವೀಕರಿಸಿದ ಪೌರಾಯುಕ್ತ ಕೆ.ಎನ್.ಹೇಮಂತ್ ಮಾತನಾಡಿ, ಮುಂದಿನ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಚರ್ಚೆಗೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಚಂದ್ರು, ಭಾನುಪ್ರಕಾಶ್, ವೇಲು, ಮುನಿರಾಜ್ ಗುರೂಜಿ, ಧನುಷ್, ಮಂಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net