ಆಗ ಒಂದು ಮನೆ ನಿರ್ಮಾಣ ವೆಚ್ಚ 6.25 ಲಕ್ಷ ರೂ. ಎಂದು ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ವಿವಿಧ ಯೋಜನೆಯಡಿ 25 ಕೋಟಿ ರೂ. ಅನುದಾನ ಮುಂಜುರಾಗಿದೆ. ಈಗ ಒಂದು ಮನೆಯ ಮೊತ್ತ 7.43 ಲಕ್ಷ ರೂ.ಗೆ ಏರಿಕೆಯಾಗಿದೆ. ಈ ಹಿಂದೆ ಆಯ್ಕೆಯಾದ ಫಲಾನುಭವಿಗಳಿಂದ 12 ಸಾವಿರ ರೂ. ಕಟ್ಟಿಸಿಕೊಳ್ಳಲಾಗಿತ್ತು. ಸಾಮಾನ್ಯರಿಗೆ 190, ಅಲ್ಪಸಂಖ್ಯಾತರಿಗೆ 29 ಹಾಗೂ ಎಸ್ಸಿಗೆ 64, ಎಸ್‌ಟಿಗೆ 5 ಮನೆಗಳು ಮುಂಜೂರಾಗಿವೆ. ಕೇಂದ್ರ, ರಾಜ್ಯ ಸರ್ಕಾರ, ನಗರೋತ್ಥಾನದಡಿ ಸಹಾಯಧನ ಮತ್ತು ಈ ಹಿಂದೆ ಕಟ್ಟಿದ ಅನುದಾನ ಸೇರಿ ಸಾಮಾನ್ಯ ವರ್ಗದವರು 4.49 ಲಕ್ಷ ರೂ. ಮತ್ತು ಪರಿಶಿಷ್ಟರು 2.86 ಲಕ್ಷ ರೂ. ಬಾಕಿ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.