ಧರ್ಮಾಧಾರಿತ ಭಯೋತ್ಪಾದನೆ ಆತಂಕಕಾರಿ | Swamiji appointed

ಶಿರಾಳಕೊಪ್ಪ ವಿರಕ್ತ ಮಠದಲ್ಲಿ ನಡೆದ ನೂತನ ಪೀಠಾಧಿಕಾರಿ ನೇಮಕ ಸಭೆಯನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶ್ರೀ, ಶ್ರೀ ಚನ್ನಬಸವ ಸ್ವಾಮೀಜಿ ಇತರರಿದ್ದರು.
ಶಿರಾಳಕೊಪ್ಪ ವಿರಕ್ತ ಮಠದಲ್ಲಿ ನಡೆದ ನೂತನ ಪೀಠಾಧಿಕಾರಿ ನೇಮಕ ಸಭೆಯನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶ್ರೀ, ಶ್ರೀ ಚನ್ನಬಸವ ಸ್ವಾಮೀಜಿ ಇತರರಿದ್ದರು.
Published on
ಶಿರಾಳಕೊಪ್ಪ: ಜಾತ್ಯತೀತ ರಾಷ್ಟ್ರದಲ್ಲಿ ಧರ್ಮದ ಆಧಾರದಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಜೀವ ಉಳಿಸಬೇಕಾದ ವೈದ್ಯರೇ ಧರ್ಮದ ನಶೆಯಲ್ಲಿ ಅಮಾಯಕರ ಜೀವ ತೆಗೆಯಲು ಆತ್ಮಹತ್ಯಾ ಬಾಂಬರ್‌ಗಳಾಗಿರುವುದು ಆತಂಕದ ವಿಷಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದ ವಿರಕ್ತ ಮಠದಲ್ಲಿ ಆಯೋಜಿಸಿದ್ದ ನೂತನ ಪೀಠಾಧಿಕಾರಿ ನೇಮಕ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ದುಷ್ಟರಿಗೆ ಬುದ್ಧಿ ಕಲಿಸಲು ದೇಶವಾಸಿಗಳು ಒಗ್ಗಟ್ಟಾಗಬೇಕು ಎಂದರು.
ದೇಶದಲ್ಲಿ ನಡೆಯಬೇಕಾದ ಹೆಚ್ಚಿನ ವಿಧ್ವಂಸಕ ಕೃತ್ಯವನ್ನು ತಡೆಯುಲ್ಲಿ ಭಾರತದ ಭದ್ರತಾ ಪಡೆ ನಿರ್ವಹಿಸಿದ ಪಾತ್ರ ಬಹಳ ಮಹತ್ವದು. ಶಿಕಾರಿಪುರದ ಅಭಿವೃದ್ಧಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ. ಅಲ್ಲಮ್ಮಪ್ರಭು ಜನ್ಮಸ್ಥಳ ಅಭಿವೃದ್ಧಿಗೆ ಶಾಸಕ ಬಿ.ವೈ.ವಿಜಯೇಂದ್ರ 2 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು. ವಿರಕ್ತ ಮಠದ ನೂತನ ಉತ್ತರಾಧಿಕಾರಿಯ ಘೋಷಣಾ ಪತ್ರವನ್ನು ಎ.ಸಿ.ಚನ್ನವೀರಪ್ಪ ವಾಚಿಸಿದರು. ನೂತನ ಪಿಠಾಧಿಪತಿ ಶ್ರೀ ವೀರಬಸವ ಸ್ವಾಮಿಜಿ ಜೀವನ ದರ್ಶನ ಪ್ರವಚನ ನೀಡಿದರು. ಸಂಗೀತ ಶಿಕ್ಷಕ ಮಲ್ಲಿಕಾರ್ಜನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಹಿರೇಮಾಗಡಿ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ವೀರಶೈವ ಸಮಾಜ ಅಧ್ಯಕ್ಷ ಪ್ರಭುಸ್ವಾಮಿ ಅನಿಮಠ, ಐ.ಎಂ.ಶಿವಾನಂದ ಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net