ಪಿಡಿಒಗಳ ಕಾರ್ಯದೊತ್ತಡ ಕಡಿಮೆಗೊಳಿಸಿ I pdo work presure

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿಡಿಒಗಳ ಜಿಲ್ಲಾ ಸಂಘದ ಪ್ರಮುಖರು ಜಿಪಂ ಸಿಇಒ ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು. ಪರಮೇಶ್, ಎಲ್.ಸವಿತಾ, ವೈ.ಎಲ್.ಗಂಗಾಧರ ನಾಯ್ಕ, ನಾಗರಾಜ್, ಎಸ್.ಚಿದಾನಂದ, ರಾಘವೇಂದ್ರಕುಮಾರ್, ರವಿಕುಮಾರ್ ಇದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿಡಿಒಗಳ ಜಿಲ್ಲಾ ಸಂಘದ ಪ್ರಮುಖರು ಜಿಪಂ ಸಿಇಒ ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು. ಪರಮೇಶ್, ಎಲ್.ಸವಿತಾ, ವೈ.ಎಲ್.ಗಂಗಾಧರ ನಾಯ್ಕ, ನಾಗರಾಜ್, ಎಸ್.ಚಿದಾನಂದ, ರಾಘವೇಂದ್ರಕುಮಾರ್, ರವಿಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಲಮಿತಿಯೊಳಗೆ ವೇತನ ಬಿಡುಗಡೆಗೆ ಒತ್ತಾಯ
  • ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಆಗ್ರಹ
  • ಜಿಪಂ ಸಿಇಒ ಎನ್.ಹೇಮಂತ್‌ಗೆ ಮನವಿ ಸಲ್ಲಿಕೆ
ಶಿವಮೊಗ್ಗ: ಪಿಡಿಒ (pdo) ಗಳ ಮೇಲಿನ ಕಾರ್ಯದೊತ್ತಡ ಕಡಿಮೆ ಮಾಡಬೇಕು. ವೇತನ (salary) ವಿಳಂಬವಾಗುವುದನ್ನು ತಪ್ಪಿಸಬೇಕು. ಮೀನಾಕ್ಷಿ ಸುಂದರಂ ಸಮಿತಿ ವರದಿ ಬಹಿರಂಗ ಪಡಿಸಬೇಕೆಂದು ಆಗ್ರಹಿಸಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಪ್ರಮುಖರು ಮಂಗಳವಾರ ಜಿಪಂ ಸಿಇಒ (ceo) ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಹಾಗೂ ಕೋತಬಾಲ ಎರಡು ಗ್ರಾಪಂಗಳಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ (ಹೆಚ್ಚುವರಿ) ಕರ್ತವ್ಯ ನಿರ್ವಹಿಸುತ್ತಿದ್ದ ಮುಕ್ತಂ ಹುಸೇನ ಕರಡಿಗುಡ್ಡ ಅತಿಯಾದ ಕೆಲಸದ ಒತ್ತಡ ಹಾಗೂ ಹಿಂದಿನ ಪ್ರಕರಣವೊಂದರ ಮೇಲಿದ್ದ ಲೋಕಾಯುಕ್ತ ತನಿಖೆ ಹಾಗೂ ವೇತನವಿಲ್ಲದೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. 9 ತಿಂಗಳಿಂದ ವೇತನವಾಗದೆ ಆರ್ಥಿಕ ಮುಗ್ಗಟ್ಟು ಎದುರಾಗಿದ್ದೇ ಇದಕ್ಕೆ ಕಾರಣ ಎಂದು ಸಂಘದ ಜಿಲ್ಲಾಧ್ಯಕ್ಷ ಪರಮೇಶ್ ದೂರಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಮೇಲೆ ನಿರಂತರ ಒತ್ತಡ ಹಾಗೂ ಅಕಾಲಿಕ ಸಾವುಗಳ ಕುರಿತು ಅಧ್ಯಯನ ಮಾಡಲು ಕಳೆದ ಒಂದು ವರ್ಷದ ಹಿಂದೆ ಮೀನಾಕ್ಷಿ ಸುಂದರಂ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಆದರೆ ಈ ಸಮಿತಿಯು ಇದುವರೆಗೂ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ಮುಕ್ತಂ ಹುಸೇನ ಅವರ ಸಾವಿಗೆ ನ್ಯಾಯ ಒದಗಿಸಲು ಹಾಗೂ ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸಲು ಆತ್ಮಹತ್ಯೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತ ಕುಟುಂಬಕ್ಕೆ ಇಲಾಖೆಯಿಂದ ಸಿಗಬೇಕಾದ ಎಲ್ಲ ಆರ್ಥಿಕ ಸೌಲಭ್ಯ, ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಿ, ಅವರ ಕುಟುಂಬದ ಓರ್ವ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕು. ರಾಜ್ಯದ ಎಲ್ಲ ಪಿಡಿಒಗಳಿಗೆ ಒತ್ತಡ ರಹಿತವಾಗಿ ಕೆಲಸ ಮಾಡುವ ವಾತಾವರಣ ಸೃಷ್ಟಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಘದ ಗೌರವಾಧ್ಯಕ್ಷ ವೈ.ಎಲ್.ಗಂಗಾಧರನಾಯ್ಕ, ಮಹಿಳಾ ಘಟಕದ ಉಪಾಧ್ಯಕ್ಷ ಎಲ್.ಸವಿತಾ, ಖಜಾಂಚಿ ಎಚ್.ಎಸ್.ರಾಘವೇಂದ್ರಕುಮಾರ್, ರಾಜ್ಯಪರಿಷತ್ ಸದಸ್ಯ ಎಸ್.ಚಿದಾನಂದ, ಪ್ರಧಾನ ಕಾರ್ಯದರ್ಶಿ ನಾಗರಾಜ್, ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಇದ್ದರು.
"

ಕುಲ್ಲಕ ಕಾರಣಕ್ಕಾಗಿ ಅಮಾನತು ಮಾಡುವುದನ್ನು ಬಿಡಬೇಕು. ಕಾಲಮಿತಿಯೊಳಗೆ ತನಿಖೆ ಹಾಗೂ ಅಮಾನತು ತೆರವುಗೊಳಿಸಬೇಕು. ದಾಖಲೆ ರಹಿತ ಮತ್ತು ಆನ್‌ಲೈನ್ ಎಂಐಎಸ್ ವರದಿಗಳ ಆಧಾರದ ಮೇಲೆ ಬರುವ ದೂರುಗಳನ್ನು ತನಿಖೆ ಮಾಡುವುದು ಇಲಾಖೆ ವಿಚಾರಣೆ ಮಾಡುವುದನ್ನು ನಿಲ್ಲಿಸಬೇಕು.

— ಪರಮೇಶ್ ಪಿಡಿಒಗಳ ಸಂಘದ ಜಿಲ್ಲಾಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net