ಜ್ಞಾನ ವೃದ್ಧಿಗೆ ಪತ್ರಿಕೆ ಓದು ಸಹಕಾರಿ

ತಾಳಗುಪ್ಪದ ನಾಲಂದ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಸೀತಾರಾಮ ಹೆಗಡೆ ಮಲವಳ್ಳಿ ಅವರನ್ನು ಸನ್ಮಾನಿಸಲಾಯಿತು. ಮಹೇಶ್ ಅಂಕದ,  ಸೃಜನ್ ಗಣೇಶ್ ಹೆಗಡೆ, ಅಜಿತ್‌ಕುಮಾರ್ ಇತರರಿದ್ದರು.
ತಾಳಗುಪ್ಪದ ನಾಲಂದ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತ ಸೀತಾರಾಮ ಹೆಗಡೆ ಮಲವಳ್ಳಿ ಅವರನ್ನು ಸನ್ಮಾನಿಸಲಾಯಿತು. ಮಹೇಶ್ ಅಂಕದ, ಸೃಜನ್ ಗಣೇಶ್ ಹೆಗಡೆ, ಅಜಿತ್‌ಕುಮಾರ್ ಇತರರಿದ್ದರು.
Published on
ತಾಳಗುಪ್ಪ: ಪತ್ರಿಕೆಗಳು ಜ್ಞಾನದ ವೃದ್ಧಿಗೆ ಕಾರಣ. ಪ್ರತಿಯೊಬ್ಬರೂ ಪತ್ರಿಕೆಗಳನ್ನು ಓದುವಂತಾಗಬೇಕು ಎಂದು ಬೆಂಗಳೂರು ಕಾಯಕ ಫೌಂಡೇಷನ್ ಕಾರ್ಯದರ್ಶಿ ಮಹೇಶ್ ಅಂಕದ ತಾಳಗುಪ್ಪ ಹೇಳಿದರು.
ವಂಶವಾಹಿನಿ ಟ್ರಸ್ಟ್, ಪತ್ರಿಕಾ ಸ್ನೇಹಿತರ ಬಳಗ ಹಾಗೂ ತಾಳಗುಪ್ಪದ ನಾಲಂದ ಪ್ರೌಢಶಾಲೆ ಸಂಯುಕ್ತವಾಗಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಲೆನಾಡಿನಲ್ಲಿ ಸಾಕಷ್ಟು ಪ್ರತಿಭಾವಂತರು ಇದ್ದು, ಬೇರೆ ಬೇರೆ ಕ್ಷೇತ್ರದಂತೆ ಸಾಹಿತ್ಯ ಕ್ಷೇತ್ರದಲ್ಲೂ ಮಲೆನಾಡಿಗರ ಕೃಷಿ ಅತ್ಯಂತ ಉತ್ಕೃಷ್ಟವಾದುದು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಸೀತಾರಾಮ ಹೆಗಡೆ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷೆ ಸ್ಪಷ್ಟವಾಗಿ ಕಲಿಯಬೇಕು. ಸ್ಪಷ್ಟ ಓದು ಮತ್ತು ಬರಹಕ್ಕೆ ಮೂಲವಾದುದು ಪತ್ರಿಕೆಯ ಓದು ಎಂದರು.
ಯುವ ಸಾಹಿತಿ ಸೃಜನ್ ಗಣೇಶ್ ಹೆಗಡೆ ಮಾತನಾಡಿ, ಅನುಭವದ ಅರಿವು ಬದುಕಿಗೆ ಗಟ್ಟಿತನ ನೀಡಿದರೆ, ಓದಿನ ಅರಿವು ಪ್ರಬುದ್ಧತೆ ರೂಢಿಸುತ್ತದೆ. ಜಗತ್ತಿನ ಆಗುಹೋಗುಗಳ ಅರಿವು ನಮಗೆ ನೀಡುವ ಪತ್ರಿಕೆಯ ಓದು ಬದುಕಿನ ಅರಿವೂ ಹೌದು ಎಂದು ಹೇಳಿದರು.
ಹಿರಿಯ ಪತ್ರಕರ್ತ ಸೀತಾರಾಮ ಹೆಗಡೆ ಮಲವಳ್ಳಿ ಹಾಗೂ ನಾಲಂದ ಪ್ರೌಢಶಾಲೆ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಶಿವಕುಮಾರ್, ವಂಶವಾಹಿನಿ ಟ್ರಸ್ಟ್, ಪತ್ರಿಕಾ ಸ್ನೇಹಿತರ ಬಳಗದ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ, ಮುಖ್ಯಶಿಕ್ಷಕ ಅಜಿತ್‌ಕುಮಾರ್, ಉತ್ತರ ಕನ್ನಡ ಜಿಲ್ಲಾ ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಗಂಗಾಧರ್ ಕೊಳಗಿ, ಲಕ್ಷ್ಮೀನಾರಾಯಣ ಕಲಗಾರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net