ರಾಮಪ್ಪ ಅವರ ಸಾಮಾಜಿಕ ಕಾರ್ಯ ಮಾದರಿ | Birthday

ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್.ರಾಮಪ್ಪ ಜನ್ಮದಿನದ ಅಂಗವಾಗಿ ಸಾಗರ ಉಪವಿಭಾಗೀಯ ಆಸ್ಪತ್ರೆ, ತಾಯಿ-ಮಗು ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಟಿ.ವಿ.ಪಾಂಡುರಂಗ, ಚೇತನ್‌ರಾಜ್, ಗಿರೀಶ್ ಕೋವಿ ಇತರರಿದ್ದರು.
ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್.ರಾಮಪ್ಪ ಜನ್ಮದಿನದ ಅಂಗವಾಗಿ ಸಾಗರ ಉಪವಿಭಾಗೀಯ ಆಸ್ಪತ್ರೆ, ತಾಯಿ-ಮಗು ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಟಿ.ವಿ.ಪಾಂಡುರಂಗ, ಚೇತನ್‌ರಾಜ್, ಗಿರೀಶ್ ಕೋವಿ ಇತರರಿದ್ದರು.
Published on
ಸಾಗರ: ಸಿಗಂದೂರು ದೇವಾಲಯದ ಧರ್ಮದರ್ಶಿ ರಾಮಪ್ಪ ಅವರ ಸಾಮಾಜಿಕ ಕಾರ್ಯ ಅನುಕರಣೀಯ. ಇತರರಿಗೆ ಮಾದರಿಯಾಗುವ ರೀತಿ ಸಾಮಾಜಿಕ ಸೇವಾ ಕಾರ್ಯ ಮಾಡುತ್ತಿದ್ಧಾರೆ ಎಂದು ಪ್ರಾಂತ್ಯ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಟಿ.ವಿ.ಪಾಂಡುರಂಗ ಹೇಳಿದರು.
ಎಸ್.ರಾಮಪ್ಪ ಅವರ 74ನೇ ಜನ್ಮದಿನದ ಅಂಗವಾಗಿ ಬುಧವಾರ ಸಾಗರ ಉಪವಿಭಾಗೀಯ ಆಸ್ಪತ್ರೆ ಮತ್ತು ತಾಯಿ-ಮಗು ಆಸ್ಪತ್ರೆಯಲ್ಲಿ ಅಭಿಮಾನಿ ಬಳಗದಿಂದ ಒಳರೋಗಿಗಳಿಗೆ ಹಣ್ಣು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸಿಗಂದೂರು ಮಾದರಿ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಳ್ಳಲು ರಾಮಪ್ಪ ಅವರ ಕೊಡುಗೆ ಅಪಾರ. ಅವರ ಜನ್ಮದಿನವನ್ನು ವಿವಿಧ ಸಾಮಾಜಿಕ ಚಟುವಟಿಕೆಗಳ ಮೂಲಕ ಆಚರಿಸುತ್ತಿರುವುದು ಇತರರಿಗೆ ಮಾದರಿ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಚಿಕ್ಕ ಕ್ಷೇತ್ರವನ್ನು ಹೆಮ್ಮೆಯ ಕ್ಷೇತ್ರವಾಗಿ ನಾಡಿನಲ್ಲಿ ಹೆಸರು ಗಳಿಸುವಂತೆ ಮಾಡಲು ರಾಮಪ್ಪ ಅವರ ಪಾತ್ರ ಪ್ರಮುಖವಾಗಿದೆ. ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತವಾಗದೆ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಅವರು ನೀಡುತ್ತಿರುವ ಕೊಡುಗೆ ಅಪಾರ. ಶ್ರೀಕ್ಷೇತ್ರದ ಮೂಲಕ ಶಾಲೆಗೆ ಸುಣ್ಣ-ಬಣ್ಣ, ಆರೋಗ್ಯ ಶಿಬಿರ, ಸಾಮಾಜಿಕ ಕೆಲಸಗಳಿಗೆ ನೆರವು, ದೇವಸ್ಥಾನಗಳು, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸಹಕಾರ ಸೇರಿ ಅನೇಕ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಹೇಳಿದರು.
ಅಭಿಮಾನಿ ಬಳಗದ ಕೆ.ಹೊಳೆಯಪ್ಪ, ಗಿರೀಶ್ ಕೋವಿ, ಶೇಖರಪ್ಪ, ಚಂದ್ರಪ್ಪ, ರಾಜಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net