ಮಕ್ಕಳನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಬೆಳೆಸಿ | sankranti festival

ಮಕರ ಸಂಕ್ರಾಂತಿ ಅಂಗವಾಗಿ ಸೊರಬ ತಾಲೂಕಿನ ಗೌರಿ ಹಳ್ಳದಲ್ಲಿ ಆಯೋಜಿಸಿದ್ದ ಗೌರಿಶಂಕರ ಪೂಜೆ, ಶಿವಾನುಭವ ಕಾರ್ಯಕ್ರಮದಲ್ಲಿ ಶ್ರೀ ಕುಮಾರಕೆಂಪಿನ ವೃಷಭೇಂದ್ರ ಸ್ವಾಮೀಜಿ, ಶಿವಮೂರ್ತಿ ಮುರುಘರಾಜೇಂದ್ರ ಶ್ರೀ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಶಿವಯೋಗಿ ದೇವರು ಇತರರಿದ್ದರು.
ಮಕರ ಸಂಕ್ರಾಂತಿ ಅಂಗವಾಗಿ ಸೊರಬ ತಾಲೂಕಿನ ಗೌರಿ ಹಳ್ಳದಲ್ಲಿ ಆಯೋಜಿಸಿದ್ದ ಗೌರಿಶಂಕರ ಪೂಜೆ, ಶಿವಾನುಭವ ಕಾರ್ಯಕ್ರಮದಲ್ಲಿ ಶ್ರೀ ಕುಮಾರಕೆಂಪಿನ ವೃಷಭೇಂದ್ರ ಸ್ವಾಮೀಜಿ, ಶಿವಮೂರ್ತಿ ಮುರುಘರಾಜೇಂದ್ರ ಶ್ರೀ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಶಿವಯೋಗಿ ದೇವರು ಇತರರಿದ್ದರು.
Published on
ಸೊರಬ: ಮಕ್ಕಳ ಸುಖಕ್ಕಾಗಿ ಆಸ್ತಿಯನ್ನು ಮಾಡಿಟ್ಟು ಮುಂದೆ ಅವರ ಕಷ್ಟ ಕಾಲದಲ್ಲಿ ಅವರ ದುಖಃವನ್ನು ನೋಡುವುದಕ್ಕಿಂತಲೂ ಅವರನ್ನು ಅಧ್ಯಾತ್ಮದ ನೆಲೆಯಲ್ಲಿ ಬೆಳೆಸಬೇಕು ಎಂದು ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಗೌರಿ ಹಳ್ಳದಲ್ಲಿ ಮಕರ ಸಂಕ್ರಾಂತಿಯ ಪುಣ್ಯ ಕಾಲದಲ್ಲಿ ಆಯೋಜಿಸಿದ್ದ ಗೌರಿಶಂಕರ ಪೂಜಾ ಹಾಗೂ ಶಿವಾನುಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಕ್ಕಳು ನಿಮ್ಮ ಪರಿವರ್ತಿತ ವಂಶವಾಹಿಗಳು. ಅವರನ್ನು ಯೋಗ್ಯ ರೀತಿಯಲ್ಲಿ ಬೆಳೆಸಬೇಕು. ಎಲ್ಲರೂ ಸುಖ ಬೇಕೆಂದು ಸಂಸಾರಿಯಾಗುತ್ತಾರೆ. ಆದರೆ ಅದೆಷ್ಟು ಜನ ಸುಖವಾಗಿದ್ದರೋ ತಿಳಿಯದು. ನೀವು ಯಾವುದನ್ನು ಚಿಂತಿಸುತ್ತಿರೋ ಅದು ಆಗುತ್ತೀರಿ. ನಿಮ್ಮ ಚಿಂತನೆ ನಿಮ್ಮನ್ನು ನೀವು ಚಿಂತಿಸಿದ ರೀತಿ ಮಾಡುತ್ತದೆ. ಆದ್ದರಿಂದ ನಿಮ್ಮ ಚಿಂತನೆ, ವಿಚಾರ ಯೋಗ್ಯವಾಗಿರಲಿ ಎಂದರು.
ಜಡೆ ಸಂಸ್ಥಾನ ಮಠದ ಕುಮಾರಕೆಂಪಿನ ವೃಷಭೇಂದ್ರ ಸ್ವಾಮೀಜಿ ಮಾತನಾಡಿ, ಜಡೆ ಪ್ರಭುಕುಮಾರ ಶಿವಯೋಗಿಗಳು ಈ ಸ್ಥಾನವನ್ನು ತಮ್ಮ ಅನುಷ್ಠಾನದ ಮೂಲಕ ಕ್ಷೇತ್ರವಾಗಿಸಿದ್ದಾರೆ. ನಿಮ್ಮ ಭಕ್ತಿ ಶ್ರೇಷ್ಠವಾದದು. ಭಗವಂತನನ್ನು ಭಕ್ತಿಯಿಂದ ಮಾತ್ರ ಒಲಿಸಲು ಸಾಧ್ಯ ಎಂದು ಹೇಳಿದರು.
ಹಿರೇಮಾಗಡಿಯ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಘೋಡಗೇರಿ ಪ್ರಭುಲಿಂಗ ಮಹಾಸ್ವಾಮಿಗಳು, ಹಿರೇಮಾಗಡಿ ಶ್ರೀ ಶಿವಯೋಗಿ ದೇವರು, ಶ್ರೀ ಗಂಗಾಧರ ದೇವರು ಮಾತನಾಡಿದರು. ಹಿರಿಯರಾದ ಲಿಂಗಪ್ಪ ಶರಣರು, ಪುಟ್ಟಯ್ಯ ಶಾಸಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net