ದೌರ್ಜನ್ಯ ತಡೆ ಕಾಯ್ದೆ ಅರಿವು ಮೂಡಿಸಿ

ತ್ಯಾಗರ್ತಿ ಸಮೀಪ ಬೆಳಂದೂರು ಗ್ರಾಮದಲ್ಲಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಕೇಂದ್ರದ ಅಧಿಕಾರಿ ಸಂಜನಾ ಮಾತನಾಡಿದರು. ಧರ್ಮಪ್ಪ, ಟೀಕಪ್ಪ, ರತ್ನಮ್ಮ ಇತರರಿದ್ದರು.
ತ್ಯಾಗರ್ತಿ ಸಮೀಪ ಬೆಳಂದೂರು ಗ್ರಾಮದಲ್ಲಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಕೇಂದ್ರದ ಅಧಿಕಾರಿ ಸಂಜನಾ ಮಾತನಾಡಿದರು. ಧರ್ಮಪ್ಪ, ಟೀಕಪ್ಪ, ರತ್ನಮ್ಮ ಇತರರಿದ್ದರು.
Published on
ತ್ಯಾಗರ್ತಿ: ಮಕ್ಕಳಿಗೆ ಸರಿಯಾದ ಶಿಕ್ಷಣ ಮತ್ತು ಸಂಸ್ಕಾರ ನೀಡಿದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಕೇಂದ್ರದ ಅಧಿಕಾರಿ ಸಂಜನಾ ಹೇಳಿದರು.
ಸಮೀಪದ ಬೆಳಂದೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದಿಂದ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಸಂಘ ಸಂಸ್ಥೆಗಳ ಮೂಲಕ ಬಾಲ್ಯವಿವಾಹ, ಪೋಕ್ಸೋ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಅರಿವು ಮೂಡಿಸಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಬೇಕು ಎಂದು ತಿಳಿಸಿದರು.
ಮೇಲ್ವಿಚಾರಕ ಧರ್ಮಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿಗುವ ಸಾಲ ಸೌಲಭ್ಯ, ಸಂಪೂರ್ಣ ಸುರಕ್ಷಾ  ಆರೋಗ್ಯ ವಿಮೆ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್‌ನಲ್ಲಿ ಸಿಗುವ ಸೌಲಭ್ಯ, ಕೇಂದ್ರ ಸರ್ಕಾರದ ಜನಧನ, ಎಪಿವೈ, ಪಿಎಂಎಸ್‌ಬಿವೈ, ಪಿಎಂಜೆಡಿವೈ, ಮುದ್ರಾ ಯೋಜನೆ ಬಗ್ಗೆ  ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಹಾರ ಪ್ರತಿನಿಧಿ ಎನ್.ವಿ.ವಸಂತ ಮಾಹಿತಿ ನೀಡಿದರು.
ಜ್ಞಾನವಿಕಾಸ ಸಮನ್ವಯ ಅಧಿಕಾರಿ ಗೌರಮ್ಮ, ಒಕ್ಕೂಟದ ಅಧ್ಯಕ್ಷ ಟೀಕಪ್ಪ, ವಲಯ ಅಧ್ಯಕ್ಷೆ ರತ್ನಮ್ಮ, ಸೇವಾ ಪ್ರತಿನಿಧಿ ಭಾರತಿ, ಜಗದೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net