ಏಪ್ರಿಲ್‌ನಿಂದ ಜೂನ್ ಮಾಹೆವರೆಗಿನ ರಸಗೊಬ್ಬರ ಬೇಡಿಕೆ ಹೆಚ್ಚಾಗಿದೆ. ಯೂರಿಯಾ ಮತ್ತು ಡಿಎಪಿ ಗೊಬ್ಬರಕ್ಕೆ ಬಹು ಬೇಡಿಕೆ ಇದೆ. ತಾಲೂಕಿನಲ್ಲಿ 2,095 ಟನ್ ಯೂರಿಯಾ ಬೇಡಿಕೆ ಇದ್ದು, ಈಗಾಗಲೇ 1,053 ಟನ್ ವಿತರಣೆಯಾಗಿದೆ. 874.5 ಟನ್ ದಾಸ್ತಾನು ಇದೆ. ಡಿಎಪಿ 1,221 ಟನ್ ಬೇಡಿಕೆ ಇದೆ. ಈಗಾಗಲೇ 804 ಟನ್ ವಿತರಣೆಯಾಗಿ 244.6 ಟನ್ ದಾಸ್ತಾನು ಮಾಡಲಾಗಿದೆ. ಆದರೆ ಕಾಂಪ್ಲೆಕ್ಸ್ ಗೊಬ್ಬರಗಳಾದ ಎಂಒಪಿ, ಎನ್‌ಪಿಕೆ, ಎಸ್‌ಎಸ್‌ಪಿ, ಎನ್‌ಐಎಒ ಗೊಬ್ಬರಗಳ ದಾಸ್ತಾನು ಮತ್ತು ಬೇಡಿಕೆಗೆ ಪ್ರಮಾಣ ಸಮನಾಗಿದೆ. ಉಳುಮೆ ಮಾಡಲು ಟ್ರಾೃಕ್ಟರ್, ಟಿಲ್ಲರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಈ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿ ಯಂತ್ರಗಳ ಮಾಲೀಕರು ಪ್ರತಿ ಗಂಟೆಗೆ 900 ರೂ. ಬಾಡಿಗೆಯನ್ನು 1200 ರೂ.ಗೆ ಹೆಚ್ಚಳ ಮಾಡಿದಾರೆ. ಇದರಿಂದ ಮಧ್ಯಮ ಮತ್ತು ಸಣ್ಣ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.