ಭತ್ತ ಕಟಾವಿಗೆ ಮಳೆ ಅಡ್ಡಿ | rain effect

ಕಡದಕಟ್ಟೆ ಗದ್ದೆಯೊಂದರಲ್ಲಿ ನೀರು ನಿಂತಿರುವುದು.
ಕಡದಕಟ್ಟೆ ಗದ್ದೆಯೊಂದರಲ್ಲಿ ನೀರು ನಿಂತಿರುವುದು.
Published on
ಭದ್ರಾವತಿ: ತಾಲೂಕಿನ ವಿವಿಧೆಡೆ ಶನಿವಾರ ಸುರಿದ ಮಳೆಗೆ ಭತ್ತದ ಗದ್ದೆಗಳು ನೀರಿನಿಂದ ಆವೃತವಾಗಿ ರೈತರಿಗೆ ಆತಂಕ ಎದುರಾಗಿದೆ. ಕೆಲವೆಡೆ ಈಗಾಗಲೇ ಭತ್ತ ಕಟಾವು ಕಾರ್ಯ ಭರದಿಂದ ಸಾಗಿದೆ. ಇಂತಹ ಸಂದರ್ಭದಲ್ಲಿ ವರುಣನ ಆರ್ಭಟಕ್ಕೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಇದುವರೆಗೂ ಭತ್ತಕ್ಕೆ ಬೆಂಬಲ ಬೆಲೆಯನ್ನೂ ಘೋಷಿಸಿಲ್ಲ. ಇನ್ನೊಂದೆಡೆ ವ್ಯಾಪಾರಿಗಳು ಭತ್ತ ಮಳೆಗೆ ಸಿಲುಕಿದೆ ಎಂದು ಸಬೂಬು ಹೇಳುತ್ತ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಇದೇ ರೀತಿ ಮಳೆ ಸುರಿದರೆ ಭತ್ತ ಗದ್ದೆಯಲ್ಲೇ ಉದುರುವ ಸಾಧ್ಯತೆ ಇದೆ. ಕಟಾವು ಸಹ ಕಷ್ಟವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net