ಮಳೆಹಾನಿ ಸರ್ವೇ ಕಾರ್ಯ ಆರಂಭ | Officers visit

ಹೊಳೆಹೊನ್ನೂರು ಸಮೀಪದ ಗ್ರಾಮಗಳಲ್ಲಿ ಗಾಳಿ ಮಳೆಯಿಂದಾಗಿ ನಷ್ಟ ಆಗಿರುವ ಬಗ್ಗೆ ತಹಸೀಲ್ದಾರ್ ಪರಸಪ್ಪ ಕುರುಬರ್ ಮತ್ತು ಅಧಿಕಾರಿಗಳ ತಂಡ ಸರ್ವೇ ಮಾಡುತ್ತಿರುವುದು. ರಾಜು, ವಿಜಯಕುಮಾರ್, ನಿವೇದಿತಾ ಇತರರಿದ್ದರು.
ಹೊಳೆಹೊನ್ನೂರು ಸಮೀಪದ ಗ್ರಾಮಗಳಲ್ಲಿ ಗಾಳಿ ಮಳೆಯಿಂದಾಗಿ ನಷ್ಟ ಆಗಿರುವ ಬಗ್ಗೆ ತಹಸೀಲ್ದಾರ್ ಪರಸಪ್ಪ ಕುರುಬರ್ ಮತ್ತು ಅಧಿಕಾರಿಗಳ ತಂಡ ಸರ್ವೇ ಮಾಡುತ್ತಿರುವುದು. ರಾಜು, ವಿಜಯಕುಮಾರ್, ನಿವೇದಿತಾ ಇತರರಿದ್ದರು.
Published on
ಹೊಳೆಹೊನ್ನೂರು: ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಭಾನುವಾರ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಉಂಟಾದ ಅಡಕೆ ತೋಟ, ಮನೆ ಹಾನಿ ಕುರಿತು ಕಂದಾಯ, ತೋಟಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮೀಕ್ಷೆ ಕಾರ್ಯ ಆರಂಭಿಸಿದರು.
ಗ್ರಾಮ ಆಡಳಿತಾಧಿಕಾರಿ, ಪಿಡಿಒ, ಸಹಾಯಕ ತೋಟಗಾರಿಕೆ ಅಧಿಕಾರಿಗಳು ಸೇರಿ 24 ತಂಡಗಳನ್ನು ರಚಿಸಲಾಗಿದೆ. ಹಾನಿ ಆಗಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ವರದಿ ಮಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಸಿಬ್ಬಂದಿಯನ್ನು ಸೊರಬ, ಶಿಕಾರಿಪುರ ಹಾಗೂ ಗ್ರಾಮ ಆಡಳಿತಾಧಿಕಾರಿಗಳನ್ನು ಶಿವಮೊಗ್ಗ ತಾಲೂಕಿನಿಂದ ಕರೆಸಲಾಗಿದೆ. ನಷ್ಟದ ಬಗ್ಗೆ ಸ್ಥಳ ಮಹಜರು ಮಾಡಿ ಅರ್ಜಿದಾರರು ಹಾಗೂ ಸಾಕ್ಷಿದಾರರ ಸಹಿ ಪಡೆದು ತಾಂತ್ರಿಕ ವರದಿ ತಯಾರಿಸಲಾಗುತ್ತಿದೆ.
ಮರ, ಹಿಂಗಾರ, ಹರಳು, ಅಡಕೆ ಕಾಯಿ ಹೀಗೆ ಎಲ್ಲ ಸೇರಿ ಸುಮಾರು ಶೇ.35ರಷ್ಟು ನಷ್ಟ ಆಗಿರಬೇಕು. ಸುಮಾರು 500ಕ್ಕೂ ಮನೆಗಳ ಛಾವಣಿ, ಗೋಡೆ ಕುಸಿತಕ್ಕೆ ಒಳಗಿರುವ ಬಗ್ಗೆ ಮಾಹಿತಿ ಇದೆ. ಸಂತ್ರಸ್ತರಿಂದ ಅರ್ಜಿ, ಪಹಣಿ, ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಪ್ರತಿಗಳನ್ನು ಪಡೆಯಲಾಗುತ್ತಿದೆ ಎಂದು ತಹಸೀಲ್ದಾರ್ ಪರಸಪ್ಪ ಕುರುಬರ್ ತಿಳಿಸಿದರು.
ರಾಜಸ್ವ ನಿರೀಕ್ಷ ರಾಜು, ಗ್ರಾಮ ಲೆಕ್ಕಾಧಿಕಾರಿ ಸಿ.ವಿಜಯಕುಮಾರ್, ಪಿಡಿಒ ಶಿವಾಜಿ ದೇಸಾಯಿ, ಶಿವಾಜಿ ಡಿಸ್ಲೆ, ಇಂಜಿನಿಯರ್ ಎಚ್.ನಿವೇದಿತಾ, ಸ್ಥಳೀಯ ನಿವಾಸಿ ಎಚ್.ಜಿ.ಮಲ್ಲಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net