ರೈಲ್ವೆ ಲೆವೆಲ್ ಕ್ರಾಸ್ ಬಂದ್

ಆನಂದಪುರ ಸಮೀಪದ ಯಡೇಹಳ್ಳಿಯ ರೈಲ್ವೆ ಲೆವೆಲ್ ಕ್ರಾಸ್.
ಆನಂದಪುರ ಸಮೀಪದ ಯಡೇಹಳ್ಳಿಯ ರೈಲ್ವೆ ಲೆವೆಲ್ ಕ್ರಾಸ್.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಡ್ರೈನೇಜ್ ದುರಸ್ತಿ ಕಾಮಗಾರಿ ಹಿನ್ನೆಲೆ
ಆನಂದಪುರ: ಸಮೀಪದ ಯಡೇಹಳ್ಳಿಯ ಬಟ್ಟೆಮಲ್ಲಪ್ಪ ಸಂಪರ್ಕದ ರೈಲ್ವೆ ಲೆವೆಲ್ ಕ್ರಾಸಿಂಗ್ ಹಳಿ ಡ್ರೈನೇಜ್ ದುರಸ್ತಿ ಕಾಮಗಾರಿ ಇರುವುದರಿಂದ ಜು.30ರ ರಾತ್ರಿವರೆಗೂ ರೈಲ್ವೆ ಗೇಟ್ ಮೂಲಕ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ನಿಮಿತ್ತ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನಂದಪುರದಿಂದ ಬಟ್ಟೆಮಲ್ಲಪ್ಪ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಂದ್ ಆಗಲಿದೆ. ಆನಂದಪುರದಿಂದ ಹೊಸನಗರಕ್ಕೆ ತೆರಳುವವರು ಯಡೇಹಳ್ಳಿ-ರಿಪ್ಪನ್‌ಪೇಟೆ ರಸ್ತೆ- ಹಾಲುಗುಡ್ಡೆ- ಬಟ್ಟೆಮಲ್ಲಪ್ಪ- ಹೊಸನಗರ ಮಾರ್ಗ ಬಳಸಬೇಕು ಅಥವಾ ಯಡೇಹಳ್ಳಿ- ಕೊರ್ಲಿಕೊಪ್ಪ- ಗೇರುಬೀಸು- ಬಟ್ಟೆಮಲ್ಲಪ್ಪ- ಹೊಸನಗರ ಮಾರ್ಗ ಬಳಸಬೇಕು.
ಸಾರ್ವಜನಿಕರು ಹಾಗೂ ವಾಹನ ಚಾಲಕರು ನಿಗದಿಪಡಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಆನಂದಪುರ ಪಿಎಸ್‌ಐ ಪ್ರವೀಣ್ ಮನವಿ ಮಾಡಿದ್ದಾರೆ.
ಕಾಮಗಾರಿ ನಡೆಯುವ ಸ್ಥಳದಲ್ಲಿ  ವಾಹನಗಳನ್ನು ನಿಲ್ಲಿಸಬಾರದು. ಸಂಚಾರ ನಿಯಮಗಳನ್ನು ಪಾಲಿಸಬೇಕು. ಸಾಗರ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತೆ ಮುಂದುವರಿಯಲಿದೆ. ಪ್ರಯಾಣಿಕರು ಮತ್ತು ಚಾಲಕರು ಗೊಂದಲಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net