ಕುಟುಂಬದ ನೆಮ್ಮದಿಗೆ ದುಶ್ಚಟ ತ್ಯಜಿಸಿ

ಸೊರಬದಲ್ಲಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರವನ್ನು ತಹಸೀಲ್ದಾರ್​ ಕೆ.ಪುರಂದರ ಉದ್ಘಾಟಿಸಿದರು. ದಿನೇಶ್​, ಕಾರ್ತಿಕ್​ ಸಾಹುಕಾರ್​, ಮಾಲತೇಶ್​, ರಾಜು ಹಿರಿಯಾವಲಿ ಮುಂತಾದವರಿದ್ದರು.
ಸೊರಬದಲ್ಲಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರವನ್ನು ತಹಸೀಲ್ದಾರ್​ ಕೆ.ಪುರಂದರ ಉದ್ಘಾಟಿಸಿದರು. ದಿನೇಶ್​, ಕಾರ್ತಿಕ್​ ಸಾಹುಕಾರ್​, ಮಾಲತೇಶ್​, ರಾಜು ಹಿರಿಯಾವಲಿ ಮುಂತಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮದ್ಯವರ್ಜನ ಶಿಬಿರ ಉದ್ಘಾಟನೆ
  • ತಹಸೀಲ್ದಾರ್​ ಕೆ.ಪುರಂದರ ಅಭಿಮತ
  • ಕುಟುಂಬದ ನೆಮ್ಮದಿಗೆ ದುಶ್ಚಟ ತ್ಯಜಿಸಿ
ಸೊರಬ: ಒಂದು ಕುಟುಂಬ ಸಂತೃಪ್ತವಾಗಿ ಇರಬೇಕೆಂದರೆ ಆ ಕುಟುಂಬ ದುಶ್ಚಟಗಳಿಂದ ಮುಕ್ತವಾಗಿರಬೇಕು ಎಂದು ತಹಸೀಲ್ದಾರ್​ ಕೆ.ಪುರಂದರ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಜನಜಾಗೃತಿ ವೇದಿಕೆ ಹಾಗೂ ವಿವಿಧ ವೇದಿಕೆಗಳ ಸಹಯೋಗದಲ್ಲಿ ಗುರುವಾರ ಪಟ್ಟಣದಲ್ಲಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕುಡಿತ ಬಿಟ್ಟ ವ್ಯಕ್ತಿಗೆ ಕುಟುಂಬ ಕಟ್ಟಿಕೊಳ್ಳುವ ಶಕ್ತಿ ಹೆಚ್ಚಾಗುವ ಮೂಲಕ ಸಮಾಜದಲ್ಲಿ ಗೌರವ ದೂರೆಯುತ್ತದೆ. ಇಲ್ಲವಾದರೆ ಕುಡಿತದಿಂದ ಕುಟುಂಬ ಸರ್ವನಾಶ ಹೊಂದಿ ಆ ವ್ಯಕ್ತಿ ಸಮಾಜದಲ್ಲಿ ಕಡಗಣನೆಗೆ ಗುರಿಯಾಗುತ್ತಾನೆ ಎಂಬ ಸಾಮಾನ್ಯ ಜ್ಞಾನವನ್ನು ಪ್ರತಿಯೊಬ್ಬರೂ ಹೊಂದಬೇಕು. ಹಾಗಾಗಿ ದುಶ್ಚಟಗಳಿಂದ ದೂರವಿದ್ದಾಗ ಸುಂದರ ಸಂಸಾರ ಕಟ್ಟಿಕೊಳ್ಳಲು ಸಾಧ್ಯ ಎಂದರು.
ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಮುಂದಾಗಬೇಕು. ಶ್ರೀೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂತಹ ಶಿಬಿರಗಳನ್ನು ಏರ್ಪಡಿಸಿರುವುದು ಅತ್ಯಂತ ಶ್ಲಾನೀಯ ಎಂದು ತಿಳಿಸಿದರು.
ವ್ಯವಸ್ಥಾಪನ ಸಮಿತಿ ನಿರ್ದೇಶಕ ದಿನೇಶ್​, ಕಾರ್ತಿಕ್​ ಸಾಹುಕಾರ್​, ಪಿಎಸ್​ಐ ಮಾಲತೇಶ್​, ರಾಜು ಹಿರಿಯಾವಲಿ, ಕಾಳಿಂಗರಾಜ್​, ಮಧುರಾಯ್​ ಶೇಟ್​, ಗುರುಮೂರ್ತಿ, ತಾಲೂಕು ಪತ್ರಕರ್ತರ ಸಂದ ಅಧ್ಯ ತೋಟಪ್ಪ, ಡಿಎಸ್​ಎಸ್​ ತಾಲೂಕು ಅಧ್ಯ ಮಹೇಶ್​, ಸಮಾಜ ಸೇವಕ ನಾಗರಾಜ್​ ಗುತ್ತಿ, ಭರಮಗೌಡ ಪಾಟೀಲ್​, ಯೋಜನಾಧಿಕಾರಿ ಜಯಂತಿ, ಕಾಂಚನಾ, ಗುರುಮೂರ್ತಿ, ಸುಧಾ ಶಿವಪ್ರಸಾದ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net