ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ

ರಿಪ್ಪನ್‌ಪೇಟೆ ಸಮೀಪ ಕಲ್ಲುಹಳ್ಳ ಮಲೆನಾಡು ಪ್ರೌಢಶಾಲೆ ಶಾಲಾ ವಾರ್ಷಿಕೋತ್ಸವದಲ್ಲಿ ಸಚಿವ ಮಧು ಬಂಗಾರಪ್ಪ, ಭೀಮಣ್ಣ ನಾಯ್ಕ, ರವಿ ಪೂಜಾರ್, ಷಣ್ಮುಖಪ್ಪ, ಹೇಮಾವತಿ ಇತರರಿದ್ದರು.
ರಿಪ್ಪನ್‌ಪೇಟೆ ಸಮೀಪ ಕಲ್ಲುಹಳ್ಳ ಮಲೆನಾಡು ಪ್ರೌಢಶಾಲೆ ಶಾಲಾ ವಾರ್ಷಿಕೋತ್ಸವದಲ್ಲಿ ಸಚಿವ ಮಧು ಬಂಗಾರಪ್ಪ, ಭೀಮಣ್ಣ ನಾಯ್ಕ, ರವಿ ಪೂಜಾರ್, ಷಣ್ಮುಖಪ್ಪ, ಹೇಮಾವತಿ ಇತರರಿದ್ದರು.
Published on
ರಿಪ್ಪನ್‌ಪೇಟೆ: ಪಾಲಕರ ಆರ್ಥಿಕ ಉಳಿತಾಯ, ಮಕ್ಕಳ ಆರೋಗ್ಯ ರಕ್ಷಣೆ ಹಾಗೂ ಗುಣಮಟ್ಟದ ಶಿಕ್ಷಣ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ವಿದ್ಯಾರ್ಥಿಗಳ ಶಿಕ್ಷಣ ಕಲಿಕೆಗೆ ಸೂಕ್ತವಾಗಿವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಳ್ಳೂರು ಗ್ರಾಪಂ ವ್ಯಾಪ್ತಿ ಕಲ್ಲುಹಳ್ಳ ಮಲೆನಾಡು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಉಚಿತ ಶಿಕ್ಷಣ, ಸಮವಸ, ಪೌಷ್ಟಿಕ ಆಹಾರದ ಜತೆಗೆ ಪರಿಣಿತ ಶಿಕ್ಷಕರನ್ನು ನೇಮಕಾತಿಗೊಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಮಾಜದ ಬಹುತೇಕ ಸಾಧಕರು ಸರ್ಕಾರಿ ಶಾಲೆಯಲ್ಲೇ ಕಲಿತವರು. ಆದರೂ ಕೆಲ ಪಾಲಕರಲ್ಲಿ ಖಾಸಗಿ ಶಾಲೆ ವ್ಯಾಮೋಹವಿದೆ. ಶಾಲೆಯ ಆಯ್ಕೆ ಪಾಲಕರ ಹಕ್ಕು ಆಗಿರುವುದರಿಂದ ಯಾರಿಗೂ ನಾವು ಒತ್ತಾಯ ಮಾಡಲಾಗುವುದಿಲ್ಲ. ವಾಸ್ತವವನ್ನು ಅರಿತು ಮನಸ್ಸು ಬದಲಾಗಬೇಕು ಎಂದರು.
ಮುಳುಗಡೆ ಸಂತ್ರಸ್ತರು ಹಾಗೂ ರೈತರ ಪರ ಬೇಡಿಕೆಗಳು ನ್ಯಾಯೋಚಿತವಾಗಿದ್ದು, ಶೀಘ್ರವೇ ರೈತರ ಭೂಮಿ ಹಕ್ಕಿನ ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.
ಸಾರಗನಜೆಡ್ಡು ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವದೂತರು ಸಾನ್ನಿಧ್ಯ ವಹಿಸಿದ್ದರು. ಶಿರಸಿ ಶಾಸಕ ಭೀಮಣ್ಣ ನಾಯ್ಕ, ದಾನಿಗಳಾದ ರವಿ ಪೂಜಾರ್, ಷಣ್ಮುಖಪ್ಪ, ಗ್ರಾಪಂ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ಷಣ್ಮುಖಪ್ಪ, ಬಿ.ಜಿ.ಚಂದ್ರಮೌಳಿ, ಈಶ್ವರಪ್ಪ ಗೌಡ, ಗೀತಾಂಜಲಿ ದತ್ತಾತ್ರೇಯ, ಕಟ್ಟೆ ನಾಗಪ್ಪ, ಶಿವಪ್ಪ, ಅರುಣ್ ಕಟ್ಟೆ, ೌಜಿಯಾ ಶರಾವತ್, ಬಸವರಾಜಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net