ಕುಡುವಳ್ಳಿಯಲ್ಲಿ ಪಿಎಸ್​ಐ ಸಚಿನ್​ ಅಂತ್ಯಕ್ರಿಯೆ

ರಸ್ತೆ ಅಪಘಾತದಲ್ಲಿ ಭಾನುವಾರ ಮೃತಪಟ್ಟ ಪಿಎಸ್​ಐ ಸಚಿನ್​ ಮೃತದೇಹಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ಪೊಲೀಸ್​ ಇಲಾಖೆ ಪರವಾಗಿ ಸರ್ಕಾರಿ ಗೌರವ ಸಲ್ಲಿಸಿದರು.
ರಸ್ತೆ ಅಪಘಾತದಲ್ಲಿ ಭಾನುವಾರ ಮೃತಪಟ್ಟ ಪಿಎಸ್​ಐ ಸಚಿನ್​ ಮೃತದೇಹಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ಪೊಲೀಸ್​ ಇಲಾಖೆ ಪರವಾಗಿ ಸರ್ಕಾರಿ ಗೌರವ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಡುವಳ್ಳಿಯಲ್ಲಿ ಪಿಎಸ್​ಐ ಸಚಿನ್​ ಅಂತ್ಯಕ್ರಿಯೆ
  • ಸಕಲ ಸರ್ಕಾರಿ ಗೌರವ
  • ಚಿತ್ರದುರ್ಗದ ಬಳಿ ರಸ್ತೆ ಅಪಘಾತದಲ್ಲಿ ಮೃತ
ತೀರ್ಥಹಳ್ಳಿ: ಚಿತ್ರದುರ್ಗದ ಬಳಿ ರಸ್ತೆ ಅಪಘಾತದಲ್ಲಿ ಭಾನುವಾರ ಮೃತಪಟ್ಟ ಪಿಎಸ್​ಐ ಸಚಿನ್​ ಅವರ ಅಂತ್ಯಕ್ರಿಯೆ ಸ್ವಗ್ರಾಮ ತೀರ್ಥಹಳ್ಳಿ ತಾಲೂಕಿನ ಕುಡುವಳ್ಳಿ ಗ್ರಾಮದಲ್ಲಿ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಿತು.
ಸೋಮವಾರ ಮಧ್ಯಾಹ್ನ 12ಗಂಟೆಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ಕುಡುವಳ್ಳಿಗೆ ಆಗಮಿಸಿ ಪೊಲೀಸ್​ ಇಲಾಖೆಯಿಂದ ಗೌರವ ಸಲ್ಲಿಸಿದರು.
ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ನಂತರ ಅಂತಿಮ ಸಂಸ್ಕಾರ ನಡೆಸಲಾಯಿತು. ಭಾನುವಾರ ರಾತ್ರಿ ಚಿತ್ರದುರ್ಗದಿಂದ ಶವವನ್ನು ಕುಡುವಳ್ಳಿಗೆ ತರಲಾಗಿತ್ತು. ಸಚಿನ್​ ತಂದೆ ಕೇವಲ ಆರು ತಿಂಗಳ ಹಿಂದೆ ಮೃತಟ್ಟಿದ್ದು, ತಾಯಿ ಹಾಗೂ ಓರ್ವ ಸಹೋದರ ಇದ್ದಾರೆ. ಸಚಿನ್​ ತಂದೆ ಬೆಂಗಳೂರಿನ ಜಯದೇವ ಆಸ್ಪತ್ರೆ ಸಮೀಪದಲ್ಲಿ ಕ್ಯಾಂಟಿನ್​ ನಡೆಸಿ ಮಗನ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದ್ದರು. ಬೆಂಗಳೂರಿನಲ್ಲಿಯೇ ಓದಿ ಪದವಿ ಗಳಿಸಿದ್ದ ಸಚಿನ್​ ಪಿಎಸ್​ಐ ಹುದ್ದೆಗೇರುವ ಮೊದಲು ಸಂಚಾರ ವಿಭಾಗದ ಪೇದೆಯಾಗಿಯೂ ಕಾರ್ಯನಿರ್ವಹಿಸಿದ್ದರು. ಬಡತನದಲ್ಲಿಯೇ ಬೆಳೆದು ಉನ್ನತ ಸ್ಥಾನ ತಲುಪಿದ್ದ ಸಚಿನ್​ ಅವರ ವಿವಾಹ ಮೇ 10ಕ್ಕೆ ನಿಶ್ಚಯವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net