ಪಟ್ಟಣದ ಮನೆ ಮನೆ ಭೇಟಿ ಹಾಗೂ ಅರ್ಜಿ ವಿತರಣೆ ಸಂದರ್ಭ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯು ವಿಶೇಷ ಸಂದರ್ಭ. ಅರ್ಹ ಮತದಾರರು ಪಟ್ಟಿಯಲ್ಲಿ ಇರುವಂತೆ ಗಮನ ವಹಿಸಬೇಕು. ಮತಗಟ್ಟೆ ಅಧಿಕಾರಿಗಳು ಪರಿಷ್ಕರಣಾ ನಮೂನೆಗಳನ್ನು ನೀಡುತ್ತಿದ್ದು, ಮತದಾರರು ಅಗತ್ಯ ಮಾಹಿತಿ ನೀಡಬೇಕು. ಸಾಮಾಜಿಕ ಕಾರ್ಯಕರ್ತರು, ಸಂಘ ಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಬೂತ್ ಮಟ್ಟದ ಏಜೆಂಟರು ಬಿಎಲ್‌ಒಗಳಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.