ವಕೀಲರ ಭವನ ನಿರ್ಮಿಸಲು ಅನುದಾನ ಕೊಡಿ | Lawyers Appeal

ಹೊಸನಗರದಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಕೀಲರ ಸಂಘದ ಚಂದ್ರಪ್ಪ, ಷಣ್ಮುಕಪ್ಪ, ಡಿ.ಎನ್.ಹಿರಿಯಪ್ಪ ಮತ್ತಿತರರು ಮನವಿ ಸಲ್ಲಿಸಿದರು.
ಹೊಸನಗರದಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವಕೀಲರ ಸಂಘದ ಚಂದ್ರಪ್ಪ, ಷಣ್ಮುಕಪ್ಪ, ಡಿ.ಎನ್.ಹಿರಿಯಪ್ಪ ಮತ್ತಿತರರು ಮನವಿ ಸಲ್ಲಿಸಿದರು.
Published on
ಹೊಸನಗರ: ವಕೀಲರ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಕೋರಿ ವಕೀಲರ ಸಂಘದ ಪದಾಧಿಕಾರಿಗಳು ಪಿಡಬ್ಲುೃಡಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ನ್ಯಾಯಾಲಯ ಸ್ಥಾಪನೆಯಾಗಿ 33 ವರ್ಷಗಳಾಗಿವೆ. 50ಕ್ಕೂ ಹೆಚ್ಚು ವಕೀಲರು ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಾಲಯ ಕಟ್ಟಡದಲ್ಲಿ ವಿಶ್ರಾಂತಿ ಪಡೆಯಲು, ಕುಳಿತುಕೊಳ್ಳಲು, ಉಪಾಹಾರ ಸೇವಿಸಲು ಪ್ರತ್ಯೇಕ ವ್ಯವಸ್ಥೆ ಇಲ್ಲ. ಇದರಿಂದ ಮಹಿಳಾ ವಕೀಲರಿಗೂ ತೊಂದರೆಯಾಗಿದೆ. ರಾಜ್ಯದ ಬೇರೆ ಬೇರೆ ಭಾಗದಿಂದ ಬರುವ ವಕೀಲರಿಗೂ ಸೂಕ್ತ ವ್ಯವಸ್ಥೆಯ ಕೊರತೆ ಇದೆ ಎಂದು ಗಮನಕ್ಕೆ ತಂದರು.
ರಾಜ್ಯದ ಬಹುತೇಕ ಕಡೆ ವಕೀಲರ ಭವನಗಳಿವೆ. ಆದರೆ ಹೊಸನಗರಕ್ಕೆ ಭವನ ಮಂಜೂರಾಗಿದ್ದರೂ ಹಣ ಬಿಡುಗಡೆಯಾಗಿಲ್ಲ. ಈಗಾಗಲೇ ಕಳೂರು ಗ್ರಾಮದ ಸರ್ವೇ ನಂ. 195/2 ರಲ್ಲಿ 2 ಎಕರೆ 2 ಗುಂಟೆ ಜಾಗದಲ್ಲಿ ಭವನದ ನಿರ್ಮಾಣಕ್ಕೆ ಜಾಗ ಗುರುತಿಸಿ 2016ರಲ್ಲಿ ನೀಲಿನಕ್ಷೆ ತಯಾರಾಗಿದೆ. ಭವನಕ್ಕೆ 2.20 ಕೋಟಿ ರೂ. ವೆಚ್ಚವಾಗಲಿದೆ. ಪ್ರಸ್ತುತ ನಿರ್ಮಾಣ ದರ ಹೆಚ್ಚಾಗಿದ್ದು, ಅದನ್ನೂ ಸೇರಿಸಿ ಹೆಚ್ಚಿನ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಸುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವ ಸತೀಶ್ ಜಾರಕಿಹೊಳಿ, ಈ ಬಗ್ಗೆ ಪರಿಶೀಲಿಸಿ ಅನುದಾನ ಬಿಡುಗಡೆ ಸಂಬಂಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಚಿವರು ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಸನ್ಮಾನಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಹಿರಿಯ ವಕೀಲರಾದ ಷಣ್ಮುಕಪ್ಪ, ಡಿ.ಎನ್.ಹಿರಿಯಪ್ಪ, ರಾಮಚಂದ್ರ, ರವೀಂದ್ರ, ಮೋಹನ್ ಜಿ. ಶೆಟ್ಟಿ, ಬಸವರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net