ರೈತರಿಗೆ 12 ತಾಸು ವಿದ್ಯುತ್ ಕೊಡಿ | Protest

ಕೃಷಿ ಪಂಪ್‌ಸೆಟ್‌ಗಳಿಗೆ 12 ತಾಸು ವಿದ್ಯುತ್ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಸೊರಬದಲ್ಲಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಂಜುನಾಥ ಗೌಡ, ಈಶ್ವರಪ್ಪ, ಶಿವಮೂರ್ತಿ, ಬಾಷಾ ಸಾಬ್ ಇತರರಿದ್ದರು.
ಕೃಷಿ ಪಂಪ್‌ಸೆಟ್‌ಗಳಿಗೆ 12 ತಾಸು ವಿದ್ಯುತ್ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಸೊರಬದಲ್ಲಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಂಜುನಾಥ ಗೌಡ, ಈಶ್ವರಪ್ಪ, ಶಿವಮೂರ್ತಿ, ಬಾಷಾ ಸಾಬ್ ಇತರರಿದ್ದರು.
Published on
ಸೊರಬ: ತಾಲೂಕಿನಲ್ಲಿ ಬರಗಾಲದಿಂದ ಬೆಳೆ ನಷ್ಟವಾಗಿರುವ ಜತೆಗೆ ಈಗ ವಿದ್ಯುತ್ ಸರಬರಾಜು ಇಲ್ಲದೆ ಬೆಳೆಗಳು ಒಣಗಿ ರೈತರ ಬದುಕು ಮೂರಾಬಟ್ಟೆಯಾಗಿದೆ. ಹಾಗಾಗಿ ಕನಿಷ್ಠ 12 ತಾಸು ವಿದ್ಯುತ್ ಸರಬರಾಜು ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬುಧವಾರ ಮೆಸ್ಕಾಂಗೆ ಮನವಿ ಸಲ್ಲಿಸಿದರು.
ವಿಜ್ಞಾನಿಗಳು ಜೂನ್ ಆರಂಭದಲ್ಲಿಯೇ ಬರಗಾಲದ ಮುನ್ಸೂಚನೆ ನೀಡಿದ್ದರೂ ಸಹ ವಿದ್ಯುತ್ ಇಲಾಖೆ ಈ ಬಗ್ಗೆ ಮುಂಜಾಗ್ರತೆ ವಹಿಸಿಲ್ಲ. ಹಾಗಾಗಿ ಈಗ ವಿದ್ಯುತ್ ಇಲ್ಲದೆ ಬೆಳೆಗಳು ಒಣಗುತ್ತಿವೆ. ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸದೆ ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಬೆಳೆ ಹಾನಿಯಾದರೆ ಸರ್ಕಾರವೇ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ವಿದ್ಯುತ್ ಉತ್ಪಾದನೆ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ. ವಿದೇಶಕ್ಕೆ ಮಾರಾಟ ಮಾಡುವಂತಹ ಹಪಾಹಪಿ ರಾಜಕಾರಣವನ್ನು ಬಿಟ್ಟು ರೈತರಿಗೆ ವಿದ್ಯುತ್ ನೀಡಲು ಸರ್ಕಾರ ನಿರ್ದಿಷ್ಟ ಕ್ರಮ ಕೈಗೊಳ್ಳಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ 12 ತಾಸು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಮಂಜುನಾಥ ಗೌಡ, ತಾಲೂಕು ಅಧ್ಯಕ್ಷ ಈಶ್ವರಪ್ಪ, ನಾಗರಾಜ್, ಶಿವಣ್ಣ, ಎಂ.ಡಿ.ಭಾಸ್ಕರ್, ಶಿವಮೂರ್ತಿ, ಬಾಷಾ ಸಾಬ್, ಶಿವಕುಮಾರ್, ಹನುಂಮತಪ್ಪ, ವಿ.ಬಿ.ಜಾವೂರ್, ಈರಾ ನಾಯ್ಕ, ಬಸವಂತಪ್ಪ, ಪಾಲಾಕ್ಷಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net