ಕಳೆದ ನಾಲ್ಕೂವರೆ ದಶಕಗಳಿಂದ ನೀವು ಒಂದಿಲ್ಲೊಂದು ಅಧಿಕಾರದಲ್ಲಿದ್ದೀರಿ. ಅಧಿಕಾರ ಇಲ್ಲದಿದ್ದರೂ ಸ್ವಾಭಿಮಾನಿ ಕಾಂಗ್ರೆಸಿಗರು ನಿಮ್ಮ ಮನೆ ಬಾಗಿಲಿಗೆ ಬಂದಿಲ್ಲ. ನಮ್ಮ ಮತದಾರರು ಅಂದಿನಿಂದ ಇಂದಿನವರೆಗೂ ಪಕ್ಷದ ಪರವಾಗಿ ಮತ ಚಲಾಯಿಸುತ್ತಿದ್ದಾರೆ. ಅಧಿಕಾರಿಗಳು ತಪ್ಪು ಮಾಡಿದಾಗ ವಿಪಕ್ಷದವರಾದ ನಾವು ಕೇಳುವದು ಸಹಜ. ಅದನ್ನು ತಪ್ಪು ಎನ್ನಲು ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದರು. ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳದ ಶಿವರಾಂ, ಅಶ್ವಿನ್ ಪಾಟೀಲ್, ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ಹುಲ್ಮಾರ್, ಕೆಡಿಪಿ ಜಿಲ್ಲಾ ಸದಸ್ಯ ಉಮೇಶ್, ಮಂಜುನಾಥ್, ಪ್ರೇಮ್ಕುಮಾರ್, ನಾಗರಾಜ್, ಮಲ್ಲಿಕ್ ನಾಯ್ಕ, ಶಿವಲಿಂಗಪ್ಪ, ಬಸವರಾಜಪ್ಪ, ಸುರೇಶ ಸುದ್ದಿಗೋಷ್ಠಿಯಲ್ಲಿದ್ದರು.