ಶಾಶ್ವತಿ ಮಹಿಳಾ ವೇದಿಕೆ ಪ್ರಮುಖರಿಂದ ಪ್ರತಿಭಟನೆ I shashwati protest

ವಿಧವೆಯರಿಗೆ ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಬಿಡುಗಡೆಗೆ ಆಗ್ರಹಿಸಿ ಶಾಶ್ವತಿ ಮಹಿಳಾ ವೇದಿಕೆಯ ಡಾ.ಶಾಂತಾ ಸುರೇಂದ್ರ, ಚೈತ್ರಾ, ಚಂದ್ರಮತಿ ಹೆಗಡೆ, ಜಯಂತಿ, ನಂದಿನಿ, ಲೋಲಾಕ್ಷಿ, ಶಾಂತಾ ಮುಂತಾದವರಿದ್ದರು. ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Published on

ಪ್ರಮುಖ ಮುಖ್ಯಾಂಶಗಳು

  • ಕೂಡಲೇ ಪಿಂಚಣಿ ಬಿಡುಗಡೆಗೆ ಮನವಿ
  • ಸೌಲಭ್ಯಗಳ ಸ್ಥಗಿತಕ್ಕೆ ಖಂಡನೆ
  • ಜೀವನ ನಿರ್ವಹಣೆ ಮೇಲೆ ಗಂಭೀರ ಪರಿಣಾಮ
ಶಿವಮೊಗ್ಗ: ವಿಧವೆಯರಿಗೆ (widows) ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ (pension) ಸ್ಥಗಿತಗೊಂಡಿರುವುದನ್ನು ವಿರೋಧಿಸಿ ಹಾಗೂ ಕೂಡಲೇ ಪಿಂಚಣಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಾಶ್ವತಿ ಮಹಿಳಾ ವೇದಿಕೆ ಪ್ರಮುಖರು ಮಂಗಳವಾರ ಡಿಸಿ ಕಚೇರಿ (office) ಎದುರು ಪ್ರತಿಭಟನೆ ನಡೆಸಿದರು.
ಮೂರ‌್ನಾಲ್ಕು ತಿಂಗಳಿನಿಂದ ಸರ್ಕಾರದ ಯಾವ ಪಿಂಚಣಿಯೂ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಮಾಸಾಶನ ಸಿಗದೆ ವಿಧವೆಯರು ಕಂಗಲಾಗಿದ್ದಾರೆ. ಅವರ ಜೀವನ ನಿರ್ವಹಣೆ ಮೇಲೆ ಇದು ಗಂಭೀರ ಪರಿಣಾಮ ಬೀರಿದೆ. ನಿತ್ಯ ಬಳಕೆ ವಸ್ತುಗಳು, ಔಷಧ ಖರೀದಿಗೂ ಅವರಿಗೆ ಸಮಸ್ಯೆಯಾಗಿದೆ. ಕೂಡಲೇ ವಿಧವಾ ಮಾಸಾಶನ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದ ಪಿಂಚಣಿಯನ್ನು ಸರ್ಕಾರ ಬಿಡುಗಡೆ ಮಾಡದೇ ಇದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಾಶ್ವತಿ ಮಹಿಳಾ ವೇದಿಕೆ ಅಧ್ಯಕ್ಷೆ ಡಾ.ಶಾಂತಾ ಸುರೇಂದ್ರ, ಪ್ರಮುಖರಾದ ಗೀತಾ, ನಂದಿನಿ, ಲೋಲಾಕ್ಷಿ, ಶಾಂತಾ, ಲಲಿತಾ, ಶೋಭಾ, ಉಮಾದೇವಿ, ಸುಗಂಧಿನಿ, ಜಯಂತಿ, ಚೈತ್ರಾ, ಚಂದ್ರಮತಿ ಹೆಗಡೆ, ಶೈಲಾ, ದೀಪಾ ಲಕ್ಷ್ಮೀಕಾಂತ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಧವೆಯರಿಗೆ ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಬಿಡುಗಡೆಗೆ ಆಗ್ರಹಿಸಿ ಶಾಶ್ವತಿ ಮಹಿಳಾ ವೇದಿಕೆಯ ಡಾ.ಶಾಂತಾ ಸುರೇಂದ್ರ, ಚೈತ್ರಾ, ಚಂದ್ರಮತಿ ಹೆಗಡೆ, ಜಯಂತಿ, ನಂದಿನಿ, ಲೋಲಾಕ್ಷಿ, ಶಾಂತಾ ಮುಂತಾದವರಿದ್ದರು. ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net