ಮಾರಿಕಾಂಬ ಪ್ರತಿಷ್ಠಾನದ ವಿರುದ್ಧ ಪ್ರತಿಭಟನೆ | Protest through begging

ಸಾಗರ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ವಿರುದ್ಧ ಕಾನೂನು ಹೋರಾಟ ಮಾಡಲು ದೇಣಿಗೆ ಕೊಡಿ ಎಂದು ಮಾರಿಕಾಂಬಾ ಹಿತರಕ್ಷಣಾ ಸಮಿತಿ ಪ್ರಮುಖರು ಭಿಕ್ಷಾಟನೆ ಮೂಲಕ ಪ್ರತಿಭಟನೆ ನಡೆಸಿದರು. ಎಂ.ಡಿ.ಆನಂದ್, ವಿ.ಶಂಕರ್, ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ, ಜನಾರ್ದನ ಆಚಾರಿ ಇತರರಿದ್ದರು.
ಸಾಗರ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ವಿರುದ್ಧ ಕಾನೂನು ಹೋರಾಟ ಮಾಡಲು ದೇಣಿಗೆ ಕೊಡಿ ಎಂದು ಮಾರಿಕಾಂಬಾ ಹಿತರಕ್ಷಣಾ ಸಮಿತಿ ಪ್ರಮುಖರು ಭಿಕ್ಷಾಟನೆ ಮೂಲಕ ಪ್ರತಿಭಟನೆ ನಡೆಸಿದರು. ಎಂ.ಡಿ.ಆನಂದ್, ವಿ.ಶಂಕರ್, ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ, ಜನಾರ್ದನ ಆಚಾರಿ ಇತರರಿದ್ದರು.
Published on
ಸಾಗರ: ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ವಿರುದ್ಧ ಕಾನೂನು ಹೋರಾಟ ಮಾಡಲು ದೇಣಿಗೆ ಕೊಡಿ ಎಂದು ಮಾರಿಕಾಂಬಾ ಹಿತರಕ್ಷಣಾ ಸಮಿತಿಯ ಪ್ರಮುಖರು ಗುರುವಾರ ಭಿಕ್ಷಾಟನೆ ಮೂಲಕ ಪ್ರತಿಭಟನೆ ನಡೆಸಿದರು. ಸಾಗರ ಹೋಟೆಲ್ ವೃತ್ತದಿಂದ ಮಾರಿಕಾಂಬಾ ದೇವಿಯ ಗಂಡನ ಮನೆವರೆಗೆ ಮೆರವಣಿಗೆ ನಡೆಸಿ ಹಾಲಿ ಸಮಿತಿ ವಿರುದ್ಧ ಘೋಷಣೆ ಕೂಗಿದರು.
ಮಾರಿಕಾಂಬೆ ಜಾತ್ರೆ ನೂತನ ಆಡಳಿತ ಮಂಡಳಿ ರಚನೆಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ಚುನಾವಣೆಗೆ ಅಡ್ಡಿ ಆಗಬಾರದು ಎಂದು ಕೆವಿಯಟ್ ಇದ್ದಾಗ್ಯೂ ಸಮುದಾಯವೊಂದನ್ನು ಮುಂದೆ ಬಿಟ್ಟು ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ನ್ಯಾಸ ಪ್ರತಿಷ್ಠಾನ ದೇವಸ್ಥಾನದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಶಂಕೆ ಇದೆ. ಅಧಿಕಾರ ಬಿಟ್ಟು ಕೆಳಗಿಳಿಯಲು ಇಚ್ಛೆ ಇರದಿದ್ದರೆ ದೇವಸ್ಥಾನದ ಎದುರು ‘ಇದು ನಮ್ಮ ದೇವಸ್ಥಾನ’ ಎಂದು ಬೋರ್ಡ್ ನೇತುಹಾಕಲಿ. ನ್ಯಾಸ ಪ್ರತಿಷ್ಠಾನ ಕೆಳಗಿಯುವ ತನಕ ಹಿತರಕ್ಷಣಾ ಸಮಿತಿ ಎಲ್ಲ ಹಂತದ ಹೋರಾಟ ನಡೆಸುತ್ತದೆ ಎಂದು ಹಿತರಕ್ಷಣಾ ಸಮಿತಿ ಸಂಚಾಲಕ ಎಂ.ಡಿ.ಆನಂದ್ ಹೇಳಿದರು.
ಕಾನೂನು ಸಲಹೆಗಾರ ವಿ.ಶಂಕರ್ ಮಾತನಾಡಿ, ನಮ್ಮನ್ಯಾರೂ ನ್ಯಾಯಾಲಯಕ್ಕೆ ಹೋಗಲು ಎತ್ತಿ ಕಟ್ಟಿಲ್ಲ ಎಂದು ನ್ಯಾಸ ಪ್ರತಿಷ್ಠಾನದವರು ಕೊರಮ ಸಮಾಜದವರಿಂದ ಹೇಳಿಸುತ್ತಿದ್ದಾರೆ. ತಕ್ಷಣ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು. ಶಾಸಕರು ತಮ್ಮ ನೇತೃತ್ವದಲ್ಲಿ ಜಾತ್ರೆ ನಡೆಸುತ್ತೇವೆ ಎಂದು ಹೇಳಿರುವುದನ್ನು ನಮ್ಮ ಸಮಿತಿ ಸ್ವಾಗತಿಸುತ್ತದೆ ಎಂದರು.
ನಿತ್ಯಾನಂದ ಶೆಟ್ಟಿ, ಬಾಲಕೃಷ್ಣ, ಜನಾರ್ದನ ಆಚಾರಿ, ಮಂಜುನಾಥ್, ಟಿ.ರಾಮಪ್ಪ, ಜಿ.ಕೆ.ಬೈರಪ್ಪ, ಎನ್.ಶ್ರೀನಾಥ್, ಗುರುಬಸವನ ಗೌಡ, ಸದಾನಂದ, ರಘುನಾಥ್, ಕೃಷ್ಣಮೂರ್ತಿ, ದರ್ಶನ್, ಶ್ರೀಧರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net