ಭೂಮಿಯ ಫಲವತ್ತತೆ ರಕ್ಷಣೆ ಜಾಗತಿಕ ಸವಾಲು | Farmers programme

ಮುದ್ದನಹಳ್ಳಿ ಗ್ರಾಮದಲ್ಲಿ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ಸಾವಯವ ಕೃಷಿಕರ ಸಂವಾದವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಕೆ.ಎಸ್.ಗುರುಮೂರ್ತಿ, ಹನುಮಂತಪ್ಪ, ನಿಂಬೆಗೊಂದಿ ಸಿದ್ಲಿಂಗಪ್ಪ, ಕೊಳಗಿ ರೇವಣಪ್ಪ, ಸಣ್ಣಹನುಮಂತಪ್ಪ, ಮುದ್ದನಹಳ್ಳಿ ಸಂಗಪ್ಪ ಇತರರಿದ್ದರು.
ಮುದ್ದನಹಳ್ಳಿ ಗ್ರಾಮದಲ್ಲಿ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ಸಾವಯವ ಕೃಷಿಕರ ಸಂವಾದವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಕೆ.ಎಸ್.ಗುರುಮೂರ್ತಿ, ಹನುಮಂತಪ್ಪ, ನಿಂಬೆಗೊಂದಿ ಸಿದ್ಲಿಂಗಪ್ಪ, ಕೊಳಗಿ ರೇವಣಪ್ಪ, ಸಣ್ಣಹನುಮಂತಪ್ಪ, ಮುದ್ದನಹಳ್ಳಿ ಸಂಗಪ್ಪ ಇತರರಿದ್ದರು.
Published on
ಶಿಕಾರಿಪುರ: ಸಾವಯವ ಕೃಷಿ ಎನ್ನುವುದು ಕೇವಲ ಪದ್ಧತಿಯಲ್ಲ. ಅದು ನಮ್ಮ ಮಣ್ಣು ಮತ್ತು ಮುಂದಿನ ಪೀಳಿಗೆಯನ್ನು ಬದುಕಿಸುವ ಜೀವಧಾತು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಮುದ್ದನಹಳ್ಳಿಯ ತೋಟವೊಂದರಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ಸಾವಯವ ಕೃಷಿಕರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 12 ವರ್ಷ ಪ್ರಧಾನಿಯಾಗಿ ಆಡಳಿತ ಪೂರ್ಣಗೊಳಿಸಿದ ಸಂದರ್ಭ ಹಲವು ಯೋಜನೆ ಹಮ್ಮಿಕೊಂಡಿದ್ದಾರೆ. ಅದರಲ್ಲಿ ಒಂದು ಭಾಗವಾಗಿ ಸಾವಯವ ಕೃಷಿಯ ಮಹತ್ವದ ಬಗ್ಗೆ ದೇಶದೆಲ್ಲೆಡೆ ಸಂವಾದ ಮತ್ತು ಸಮಾವೇಶಗಳು ನಡೆಯುತ್ತಿವೆ ಎಂದರು.
ಪ್ರಸ್ತುತ ದಿನಗಳಲ್ಲಿ ರಾಸಾಯನಿಕಮುಕ್ತ ಕೃಷಿ ಹಾಗೂ ಭೂಮಿಯ ಫಲವತ್ತತೆ ರಕ್ಷಣೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರಾಯೋಗಿಕ ಪರಿಹಾರ ಒದಗಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ಪ್ರಮುಖ ಕೃಷಿ ಆಸಕ್ತರು, ಪ್ರಗತಿಪರ ರೈತರು ಮತ್ತು ವಿಜ್ಞಾನಿಗಳು ಒಂದೇ ವೇದಿಕೆಯಲ್ಲಿ ಸೇರಿ ಹಮ್ಮಿಕೊಂಡಿರುವ ಈ ಸಂವಾದ ರೈತರಿಗೆ ಅನುಕೂಲವಾಗಿದೆ. ಸಾವಯವ ಕೃಷಿಯ ಶಕ್ತಿ ಅದ್ಭುತವಾದುದು. ಪ್ರತಿ ಹೋಬಳಿಯ ಹೊಲ, ತೋಟಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಬೇಕು. ಜಮೀನುಗಳನ್ನು ರಾಸಾಯನಿಕಮುಕ್ತ ಮಾಡಬೇಕು ಎಂದು ಹೇಳಿದರು.
ಮಣ್ಣಿನ ಆರೋಗ್ಯ ರಕ್ಷಣೆ ಮಾಡಬೇಕಾದ ತುರ್ತಿದೆ. ನಿರಂತರ ರಾಸಾಯನಿಕ ಬಳಕೆಯಿಂದ ಕ್ಷೀಣಿಸುತ್ತಿರುವ ಮಣ್ಣಿನ ಜೀವಗುಣವನ್ನು ಮರಳಿ ಪಡೆಯಬೇಕಿದೆ. ಅದಕ್ಕಾಗಿ ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳಿಂದ ಸಾವಯವ ಗೊಬ್ಬರ ತಯಾರಿಸಿ, ಕೃಷಿ ವೆಚ್ಚವನ್ನು ತಗ್ಗಿಸುವುದು ಸೂಕ್ತ ಎಂದು ಸಲಹೆ ನೀಡಿದರು
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿಜೆಪಿ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಹನುಮಂತಪ್ಪ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಿಂಬೆಗೊಂದಿ ಸಿದ್ಲಿಂಗಪ್ಪ, ಕೊಳಗಿ ರೇವಣಪ್ಪ, ತೊಗರ್ಸಿ ಸಣ್ಣಹನುಮಂತಪ್ಪ, ಯೋಗೇಶ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಗುರುರಾಜ್, ಅಶೋಕ್, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಹುಲ್ಮಾರ್ ಮಹೇಶ್, ಮುದ್ದನಹಳ್ಳಿ ಸಂಗಪ್ಪ, ಗಣೇಶ್, ಕೃಷಿ ವಿಜ್ಞಾನಿಗಳಾದ ಡಾ. ಗಿರೀಶ್, ಡಾ. ರುದ್ರೇಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net