ಸಾಗರ-ಹೊನ್ನಾವರ ಚತುಷ್ಪಥಕ್ಕೆ ಪ್ರಸ್ತಾವನೆ

ಸಾಗರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಹರತಾಳು ಹಾಲಪ್ಪ, ಭಾರತಿ ಶೆಟ್ಟಿ ಇತರರಿದ್ದರು.
ಸಾಗರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಹರತಾಳು ಹಾಲಪ್ಪ, ಭಾರತಿ ಶೆಟ್ಟಿ ಇತರರಿದ್ದರು.
Published on
ಸಾಗರ: ತಾಲೂಕು ದೇವಸ್ಥಾನಗಳ ತವರುಮನೆ ಇದ್ದಂತೆ. ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜೋಸ್ೆ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಭಾನುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಸಾಗರವನ್ನು ಪ್ರವಾಸೋದ್ಯಮ ಪಟ್ಟಿಯಲ್ಲಿ ಪ್ರಮುಖವಾಗಿ ಗುರುತಿಸುವಂತೆ ಮಾಡಲು ಅವಕಾಶವಿದೆ ಎಂದರು.
ಆನಂದಪುರದಿಂದ ಸಾಗರ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ ಸಾಗರ-ಹೊನ್ನಾವರ ಚತುಷ್ಪಥವನ್ನಾಗಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 660 ಕೋಟಿ ರೂ. ಮಂಜೂರಾತಿ ಹಂತದಲ್ಲಿದೆ. ಮೊದಲ ಹಂತದಲ್ಲಿ ತ್ಯಾವರೆಕೊಪ್ಪದಿಂದ ಆನಂದಪುರದವರೆಗೆ, ಎರಡನೇ ಹಂತದಲ್ಲಿ ಆನಂದಪುರದಿಂದ ಸಾಗರದವರೆಗೆ ಚತುಷ್ಪಥ ಮಾಡಲಾಗುವುದು ಎಂದು ಹೇಳಿದರು.
ಹೊಸೂರು ಮತ್ತು ತಾಳಗುಪ್ಪದಲ್ಲಿ ರೈಲ್ವೆ ಮೇಲ್ಸೇತುವೆಗೆ ಮಂಜೂರಾತಿ ದೊರೆತಿದೆ. ಶೀಘ್ರ ಕೆಲಸ ಆರಂಭವಾಗುತ್ತದೆ. ಮೇಲ್ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಪರವಾನಗಿ ಅಗತ್ಯವಿತ್ತು. ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದಿಂದ ಒಪ್ಪಿಗೆ ದೊರೆತಿದೆ ಎಂದರು.
ಜೋಗ್‌ಫಾಲ್ಸ್ನಿಂದ ಹೊನ್ನಾವರವರೆಗೆ ವಾಟರ್ ಬೋಟ್ ಅಥವಾ ಕ್ರೂಸರ್ ಬಿಡುವ ಆಲೋಚನೆ ಇದ್ದು ಸರ್ವೇ ನಡೆಸಲು ಕೆಪಿಸಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಗೇರುಸೊಪ್ಪದಿಂದ ಹೊನ್ನಾವರವರೆಗೆ ವಾಟರ್ ಬೋಟ್ ಬಿಡಲು ಸಾಧ್ಯ ಎನ್ನುವುದು ಸರ್ವೇಯಲ್ಲಿ ಸಾಬೀತಾಗಿದೆ. ಕೊಡಚಾದ್ರಿಯಲ್ಲಿ ಕೇಬಲ್ ಕಾರು ಓಡಾಡಲು ಅರಣ್ಯ ಇಲಾಖೆ ಮಂಜೂರಾತಿ ದೊರೆತಿದೆ. ಸರ್ವೇ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಎಂಎಲ್‌ಸಿ ಭಾರತಿ ಶೆಟ್ಟಿ, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ರತ್ನಾಕರ ಹೊನಗೋಡು, ಪರಶುರಾಮಪ್ಪ, ಗಣೇಶ್‌ಪ್ರಸಾದ್, ರವಿ ಬಸ್ರಾಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net