ಗಾಳಿ-ಮಳೆಯಿಂದ ಆಸ್ತಿಪಾಸ್ತಿ ನಷ್ಟ | Rain effect

ರಿಪ್ಪನ್‌ಪೇಟೆ ಸಮೀಪ ಕೋಡೂರಿನಲ್ಲಿ ಮಳೆಯಿಂದ ನೆಲಕ್ಕುರುಳಿದ್ದ ವಿದ್ಯುತ್ ಕಂಬ.
ರಿಪ್ಪನ್‌ಪೇಟೆ ಸಮೀಪ ಕೋಡೂರಿನಲ್ಲಿ ಮಳೆಯಿಂದ ನೆಲಕ್ಕುರುಳಿದ್ದ ವಿದ್ಯುತ್ ಕಂಬ.
Published on
ರಿಪ್ಪನ್‌ಪೇಟೆ: ಪಟ್ಟಣ ಸೇರಿ ಸುತ್ತಮುತ್ತ ಪ್ರದೇಶದಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆಯಿಂದ ಮರಗಳು ಬಿದ್ದು ಮನೆ, ಕೊಟ್ಟಿಗೆಗಳು ಹಾನಿಗೀಡಾಗಿವೆ. ಕೆಲವು ಮನೆಗಳ ಛಾವಣಿ ಹಾರಿಹೋಗಿವೆ. ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ.
ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜವಳ್ಳಿ, ಕಾಳಶೆಟ್ಟಿಕೊಪ್ಪ, ಶುಂಠಿಕೊಪ್ಪ, ಹರತಾಳು, ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಬಿಳಕಿ, ಮೈತೆ ಹಾಗೂ ಬಾಳೂರಿನಲ್ಲಿ ಒಟ್ಟು 21 ವಾಸದ ಮನೆ ಹಾಗೂ 3 ಕೊಟ್ಟಿಗೆಗಳು ಹಾನಿಗೀಡಾಗಿವೆ.
ಮೈತೆ, ಬಿಳಕಿಗೆ ಸಾಗುವ ರಸ್ತೆ ಇಕ್ಕೆಲಗಳ ಮರಗಳು ಮುರಿದುಬಿದ್ದು  ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಮರಗಳನ್ನು ಶುಕ್ರವಾರ ಬೆಳಗ್ಗೆ ತೆರವುಗೊಳಿಸಲಾಯಿತು.
ಕೋಡೂರು, ಜೇನಿ, ಹುಂಚ ಭಾಗಗಳಲ್ಲಿ 50ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದುಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಬಿಲ್ಲೇಶ್ವರದಲ್ಲಿ ಹೆದ್ದಾರಿಗೆ ಬಿದ್ದಿದ್ದ ಮಾವಿನ ಮರವನ್ನು ತೆರವುಗೊಳಿಸಲಾಗಿದೆ.
ಮಳೆಹಾನಿ ಪ್ರದೇಶಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು, ಹೊಸನಗರ ತಾಲೂಕು ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಸಮಗ್ರ ವರದಿ ಕೊಡುವಂತೆ ತಿಳಿಸಿದರು.
ತಹಸೀಲ್ದಾರ್ ಭರತ್ ರಾಜ್, ಮೆಸ್ಕಾಂ ಎಇಇ ಚಂದ್ರಶೇಖರ್, ಕಂದಾಯ ನಿರೀಕ್ಷಕ ಅಫ್ರೋಜ್ ಅಹಮ್ಮದ್, ಬಿ.ಜಿ.ಚಂದ್ರಮೌಳಿ ಗೌಡ, ಚಿದಂಬರ, ಶಿವಮೂರ್ತಿ, ಕುಮಾರ, ಜಯಶೀಲಪ್ಪ ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net