ಹಲಸಿನ ಮೌಲ್ಯವರ್ಧನೆಯಿಂದ ಲಾಭ

ಆನಂದಪುರ ಸಮೀಪದ ಇರುವಕ್ಕಿ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಹಲಸಿನ ಹಣ್ಣಿನ ಮೌಲ್ಯವರ್ಧನೆ ಕಾರ್ಯಾಗಾರದಲ್ಲಿ ಮಾಹಿತಿ ನೀಡುತ್ತಿರುವುದು. ಡಾ. ರಾಘವೇಂದ್ರ ಮೇಸ್ತ, ರವೀಂದ್ರ ಕಾಶಿ, ಡಾ. ಶ್ರುತಿ ನಾಯಕ್, ಡಾ. ಕೃಷ್ಣ ರೆಡ್ಡಿ ಇತರರಿದ್ದರು.
ಆನಂದಪುರ ಸಮೀಪದ ಇರುವಕ್ಕಿ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಹಲಸಿನ ಹಣ್ಣಿನ ಮೌಲ್ಯವರ್ಧನೆ ಕಾರ್ಯಾಗಾರದಲ್ಲಿ ಮಾಹಿತಿ ನೀಡುತ್ತಿರುವುದು. ಡಾ. ರಾಘವೇಂದ್ರ ಮೇಸ್ತ, ರವೀಂದ್ರ ಕಾಶಿ, ಡಾ. ಶ್ರುತಿ ನಾಯಕ್, ಡಾ. ಕೃಷ್ಣ ರೆಡ್ಡಿ ಇತರರಿದ್ದರು.
Published on
ಆನಂದಪುರ: ಹಲಸಿನ ಹಣ್ಣಿನ ಮೌಲ್ಯವರ್ಧನೆಯು ರೈತರಿಗೆ ಹೆಚ್ಚಿನ ಆದಾಯ ತರಲಿದೆ ಎಂದು ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ವಿಸ್ತರಣಾ ನಿರ್ದೇಶಕ ಕೆ.ರಾಘವೇಂದ್ರ ಮೇಸ್ತ ಹೇಳಿದರು.
ಸಮೀಪದ ಇರುವಕ್ಕಿ ಕೃಷಿ ಮತ್ತು ತೋಟಗಾರಿಕಾ ವಿವಿಯಲ್ಲಿ ಆಯೋಜಿಸಿದ್ದ ಹಲಸಿನ ಮೌಲ್ಯ ವರ್ಧನೆ ಕಾರ್ಯಾಗಾರದಲ್ಲಿ ಮಾತನಾಡಿ, ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಅತ್ಯಧಿಕ ಹಲಸಿನ ಫಸಲು ದೊರೆಯುತ್ತದೆ. ಅವುಗಳನ್ನು ನೇರವಾಗಿ ಮಾರಾಟ ಮಾಡುವ ಬದಲು ಸಂಸ್ಕರಿಸಿ ಮಾರಾಟ ಮಾಡುವ ಪದ್ಧತಿ ಅಳವಡಿಸಿಕೊಂಡರೆ ಹೆಚ್ಚು ಲಾಭ ಸಾಧ್ಯ ಎಂದು ತಿಳಿಸಿದರು.
ಹಲಸು ಬೇಗ ಕೊಳೆಯುವ ಕಾರಣ ನಿಗದಿತ ಸಮಯದೊಳಗೆ ಸಂಸ್ಕರಿಸಿ ಸಂಗ್ರಹಿಸಬೇಕು. ಮಾರುಕಟ್ಟೆ ಬೇಡಿಕೆ ಅವಲೋಕಿಸಿ ಬೇಕಾದಾಗ ಮಾರಾಟ ಮಾಡಲು ಸಾಧ್ಯ. ಈ ಬಗ್ಗೆ ಮಾಹಿತಿ ಕೊರತೆ ನೀಗಿಸಲು ರೈತರಿಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದರು.
ಸಾಗರ ಸಮೀಪದ ಅತ್ತಿಸರ ಗ್ರಾಮದ ರವೀಂದ್ರ ಕಾಶಿ ಹಲಸಿನ ಹಣ್ಣಿನಿಂದ ಹಲವು ಸಿಹಿ ತಿನಿಸು, ಪಾಯಸ, ವೈನ್ ತಯಾರಿಕೆ, ಕಾಯಿಯಿಂದ ಕೋಸಂಬರಿ, ಬೋಂಡಾ, ಚಿಪ್ಸ್, ಹಪ್ಪಳ ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ವಿವಿ ಅಧೀನದ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಶ್ರುತಿ ನಾಯಕ್ ಹಲಸಿನ ಹಣ್ಣಿನ ಬನ್ಸ್, ಜಾಮ್ ಇತ್ಯಾದಿ ತಯಾರಿಕೆ ಬಗ್ಗೆ ತರಬೇತಿ ನೀಡಿದರು. ರೈತ ತರಬೇತಿ ಸಂಸ್ಥೆಯ ಡಾ. ಕೃಷ್ಣ ರೆಡ್ಡಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net