ಸಾಗರದಲ್ಲಿ ಡಿಎಸ್ಎಸ್ನಿಂದ(ಪಾಂಡುರಂಗಸ್ವಾಮಿ ಬಣ) ಏರ್ಪಡಿಸಿದ್ದ ಪ್ರೊ. ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ರಾಜ್ಯ ರೈತ ಸಂದ ಉಪಾಧ್ಯ ಶಿವಾನಂದ ಕುಗ್ವೆ ಪುಷ್ಪಾರ್ಚನೆ ಮಾಡಿದರು. ಗಣಪತಿ, ಕಲ್ಲಪ್ಪ, ಗೌರಮ್ಮ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಕಾರ್ಯಕ್ರಮ
ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಹೇಳಿಕೆ
ಪ್ರೊ. ಬಿ.ಕೃಷ್ಣಪ್ಪ ದಲಿತರ ಧ್ವನಿಯಾಗಿದ್ದ ನಾಯಕ
ಸಾಗರ: ದಲಿತ ಸಮೂಹಕ್ಕೆ ಧ್ವನಿ ನೀಡಿದ ಧೀಮಂತ ನಾಯಕ ಪ್ರೊ. ಬಿ.ಕೃಷ್ಣಪ್ಪ ಅವರ ಹೋರಾಟದ ಹಾದಿ ದಲಿತ ಸಮೂಹಕ್ಕೆ ಸ್ಫೂರ್ತಿದಾಯಕ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಹೇಳಿದರು.
ಸಾಗರದ ದಲಿತ ಸಂರ್ಷ ಸಮಿತಿ (ಪಾಂಡುರಂಗ ಸ್ವಾಮಿ ಬಣ)ಯಿಂದ ಏರ್ಪಡಿಸಿದ್ದ ಪ್ರೊ. ಬಿ.ಕೃಷ್ಣಪ್ಪ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಲಿತ ಸಮೂಹ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಂವಿಧಾನದ ಆಶಯ ತಳಮಟ್ಟದವರೆಗೂ ತಲುಪಬೇಕು ಎಂಬ ಡಾ. ಬಿ.ಆರ್.ಅಂಬೇಡ್ಕರ್ ಅವರ ಉದ್ದೇಶವನ್ನು ಸಾಕಾರಗೊಳಿಸಲು ಪ್ರೊ.ಬಿ.ಕೃಷ್ಣಪ್ಪ ಶ್ರಮಿಸಿದವರು. ಎಲ್ಲೆಲ್ಲಿ ದಲಿತ ಸಮೂಹದ ಮೇಲೆ ದೌರ್ಜನ್ಯ ನಡೆಯುತ್ತಿತ್ತೋ ಅಲ್ಲಿಗೆ ತೆರಳಿ ಅವರ ಪರವಾಗಿ ಹೋರಾಡುತ್ತಿದ್ದರು. ದಲಿತ ಸಮುದಾಯಕ್ಕೆ ಭೂಹಕ್ಕು ಕೊಡಿಸಲು ಹೋರಾಟ ರೂಪಿಸುವ ಜತೆಗೆ ಚಂದ್ರಗುತ್ತಿಯ ಬೆತ್ತಲೆಸೇವೆ ನಿಲ್ಲಿಸುವಲ್ಲಿ ಪ್ರೊ. ಬಿ.ಕೃಷ್ಣಪ್ಪ ಅವರು ರೂಪಿಸಿದ ಹೋರಾಟ ಅವಿಸ್ಮರಣೀಯ ಎಂದರು.
ಪ್ರೊ. ಬಿ.ಕೃಷ್ಣಪ್ಪ ಅವರು ಹಚ್ಚಿದ ಹೋರಾಟದ ದೀಪ ಆರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆ. ದಲಿತರು ಎಂದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರವಲ್ಲ. ಎಲ್ಲ ಸಮುದಾಯದಲ್ಲಿ ಇರುವ ಆರ್ಥಿಕ, ಸಾಮಾಜಿಕ, ಶೈಣಿಕವಾಗಿ ಹಿಂದುಳಿದವರು ನಮ್ಮ ಸಂಟನೆಯಲ್ಲಿ ಸಕ್ರಿಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ನಮ್ಮ ಸಂಟನೆಯಲ್ಲಿ ಎಲ್ಲರೂ ಗುರುತಿಸಿಕೊಳ್ಳಲು ಅವಕಾಶ ಇದೆ.