ಸಾಗರ: ಮಹಿಳೆಯರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗಬೇಕು. ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ನಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸ್ವಾಭಿಮಾನದ ಬದುಕು ನಡೆಸಲು ಪೂರಕ ವಾತಾವರಣ ಸಮಾಜ ನಿರ್ಮಾಣ ಮಾಡಿದೆ. ಶೇ.33ರಷ್ಟು ಮೀಸಲಾತಿ ಮಹಿಳೆಯರಿಗೆ ನೀಡಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನ ಶ್ರೀವಾಗಿ ಆಗಬೇಕು. ಸಮಾಜಮುಖಿ ಆಲೋಚನೆ ಮಹಿಳೆಯರಲ್ಲಿ ಹೆಚ್ಚಾಗಬೇಕು ಎಂದು ತಿಳಿಸಿದರು.
ದೇವರು ಅವಕಾಶಗಳ ರೂಪದಲ್ಲಿ ವರ ನೀಡುತ್ತಾನೆ. ನಾವು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರಗತಿ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕು. ಕಾಂಗ್ರೆಸ್ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ರಾಜಕೀಯ ೇತ್ರಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದರು.
ಡಾ. ಶುಭಾ ಮರವಂತೆ ಉಪನ್ಯಾಸ ನೀಡಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪ್ರಭಾವತಿ ಚಂದ್ರಕಾಂತ್, ಶ್ವೇತಾ ಬಂಡಿ, ಸರಸ್ವತಿ ನಾಗರಾಜ್, ಮಧುಮಾಲತಿ, ದೀಪಾ ಕಾಗೋಡು, ಉಷಾ ಸುರೇಶ್, ಎನ್.ಲಲಿತಮ್ಮ, ಸಿರಿಜಾನ್, ಸದ್ದಾಂ, ಕಲಸೆ ಚಂದ್ರಪ್ಪ, ಸುರೇಶ ಬಾಬು ಇತರರಿದ್ದರು.
ಮಹಿಳೆಯರು ಸ್ವಸಾಮರ್ಥ್ಯದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಾಗ ಅವರಿಗೆ ಸೂಕ್ತ ಸಹಕಾರ ನೀಡುವಂತಾಗಬೇಕು. ಮಹಿಳೆಯರು ಸ್ವಾಭಿಮಾನದ ಬದುಕು ನಡೆಸಬೇಕು.