ಮಹಿಳಾ ಸಬಲೀಕರಣಕ್ಕೆ ಆದ್ಯತೆ

ಸಾಗರ ತಾಲೂಕಿನ ಕುದುರೂರು ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಯೋಜನೆಯ ತುಮರಿ ವಲಯ ಮಟ್ಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಉಮಾ ನಾಗೇಂದ್ರ ಉದ್ಘಾಟಿಸಿದರು. ದಿನೇಶ್, ಪಿ.ದಯಾನಂದ್, ಲಕ್ಷ್ಮೀ, ಸುಶ್ಮಿತಾ ನಾಗರಾಜ್ ಇತರರಿದ್ದರು.
ಸಾಗರ ತಾಲೂಕಿನ ಕುದುರೂರು ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಯೋಜನೆಯ ತುಮರಿ ವಲಯ ಮಟ್ಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಉಮಾ ನಾಗೇಂದ್ರ ಉದ್ಘಾಟಿಸಿದರು. ದಿನೇಶ್, ಪಿ.ದಯಾನಂದ್, ಲಕ್ಷ್ಮೀ, ಸುಶ್ಮಿತಾ ನಾಗರಾಜ್ ಇತರರಿದ್ದರು.
Published on
ಸಾಗರ: ಗ್ರಾಮೀಣ ಭಾಗದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಕುದುರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾ ನಾಗೇಂದ್ರ ಹೇಳಿದರು.
ಸಾಗರ ತಾಲೂಕಿನ ಕುದುರೂರು ಗ್ರಾಪಂ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಮರಿ ವಲಯ ಮಟ್ಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಹಿಳೆಯರು ಸ್ವಯಂ ಉದ್ಯೋಗ ನಿರ್ವಹಿಸಲು, ಆರ್ಥಿಕವಾಗಿ ಸಶಕ್ತರಾಗಲು, ಕೃಷಿ ಸೇರಿ ವಿವಿಧ ರಂಗದಲ್ಲಿ ತೊಡಗಿಸಿಕೊಳ್ಳಲು ಯೋಜನೆ ಮೂಲಕ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಸೌಲಭ್ಯ ಸದ್ಬಳಕೆ ಜತೆಗೆ ಕಾಲಕಾಲಕ್ಕೆ ಸಂಘದಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿ ಇನ್ನೊಬ್ಬರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಯೋಜನೆಯ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕ ದಿನೇಶ್ ಮಾತನಾಡಿ, ಯೋಜನೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪದಾಧಿಕಾರಿಗಳ ಶ್ರಮ ವಿಶೇಷವಾಗಿದೆ. ಪೂಜ್ಯರು ಕಂಡ ಕನಸು-ನನಸು ಮಾಡುವಲ್ಲಿ ಪದಾಧಿಕಾರಿಗಳ ಸೇವೆ ಅನನ್ಯ. ಸ್ವಸಹಾಯ ಗುಂಪುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಗುಂಪಿನ ಪ್ರತಿನಿಧಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು ಯೋಜನೆ ಸೌಲಭ್ಯ ಪಡೆಯಿರಿ ಎಂದು ಸಲಹೆ ನೀಡಿದರು.
ತಾಲೂಕು ಯೋಜನಾಧಿಕಾರಿ ಪಿ.ದಯಾನಂದ್, ಮೇಲ್ವಿಚಾರಕಿ ಲಕ್ಷ್ಮೀ, ಸೇವಾ ಪ್ರತಿನಿಧಿಗಳಾದ ನಾಗರಾಜ್, ಪುಷ್ಪದಂತ, ಸತ್ಯನಾರಾಯಣ, ಗೋವಿಂದ, ಅಶೋಕ್, ಸುಶ್ಮಿತಾ, ಪೂರ್ಣಿಮಾ, ರೂಪಶ್ರೀ, ಭಾಸ್ಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net