ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ತಡೆಯಿರಿ I bakrid festival
ಬಕ್ರೀದ್ ಹಬ್ಬದ ಸಂದರ್ಭ ಅಕ್ರಮ ಗೋಸಾಗಣೆ, ಹತ್ಯೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ವಿ.ಅಭಿಷೇಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಕೆ.ಇ.ಕಾಂತೇಶ್, ಉಮೇಶ್ ಆರಾಧ್ಯ, ಬಿ.ಎ.ರಂಗನಾಥ್, ಇ.ವಿಶ್ವಾಸ್, ಉಮಾದೇವಿ, ಸುಮತೀಂದ್ರಾಚಾರ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗೋವರ್ಧನ ಟ್ರಸ್ಟ್‌ನಿಂದ ಜಿಲ್ಲಾಡಳಿತಕ್ಕೆ ಮನವಿ
ಅಕ್ರಮ ಗೋಸಾಗಣೆಗೆ ಆಕ್ರೋಶ
ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆಗೆ ಬೇಸರ
ಶಿವಮೊಗ್ಗ: ಬಕ್ರೀದ್ (bakridh) ಸಂದರ್ಭದಲ್ಲಿ ಅಕ್ರಮ ಗೋ (cow) ಕಳ್ಳಸಾಗಣೆ ಮತ್ತು ಗೋಹತ್ಯೆ ತಡೆಯಬೇಕೆಂದು ಆಗ್ರಹಿಸಿ ಗೋವರ್ಧನ ಟ್ರಸ್ಟ್ ಮಹಾಪೋಷಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (eshwarappa) ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಹಬ್ಬದ ಸಂದರ್ಭ ಗೋಹತ್ಯೆ ಸಂಪೂರ್ಣ ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಗೋವುಗಳ ಅಕ್ರಮ ಸಾಗಣೆ ಮತ್ತು ಹತ್ಯೆ ನಿರಂತರ ನಡೆಯುತ್ತಿರುವುದು ಕಳವಳಕಾರಿ. ಬಕ್ರೀದ್ ಹಬ್ಬದಲ್ಲಿ ಗೋವುಗಳ ವಧೆ ಮಾಡುವುದು ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮದಂತೆ ಕಾನೂನುಬಾಹಿರ. ಇದು ಶಿಕ್ಷಾರ್ಹ ಅಪರಾಧ. ಶಿವಮೊಗ್ಗದಲ್ಲಿ ಗೋಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ಹಾಕಬೇಕು ಎಂದು ಆಗ್ರಹಿಸಿದರು.
ವಾಹನಗಳಲ್ಲಿ ಗೋವುಗಳನ್ನು ಅಮಾನುಷವಾಗಿ, ಹಿಂಸಾತ್ಮಕ ರೀತಿಯಲ್ಲಿ ಸಾಗಣೆ ಮಾಡಲಾಗುತ್ತದೆ. ಬಿಡಾಡಿ ದನಗಳು ಮತ್ತು ಕರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರೆ ಅಥವಾ ತಡೆಯಲು ಹೋದ ಹಿಂದೂ ಯುವಕರ ಮೇಲೆಯೇ ಕೇಸು ದಾಖಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋವಧೆಗೆ ಅನೇಕ ತಂತ್ರಗಾರಿಕೆ ಮಾಡಲಾಗುತ್ತಿದೆ. ಕೃಷಿ ಚಟುವಟಿಕೆಗೆಂದು ರೈತರಿಂದ ಜಾನುವಾರು ಖರೀದಿಸಿ ಅವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ. ಗೋವರ್ಧನ ಟ್ರಸ್ಟ್ ಯಾವ ಕಾರಣಕ್ಕೂ ಹಸುಗಳನ್ನು ಕಸಾಯಿಖಾನೆಗೊಯ್ಯಲು ಅವಕಾಶ ನೀಡುವುದಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ, ರಕ್ಷಣಾ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.