ಹಸೆ ಚಿತ್ತಾರ ಕಲಾವಿದನಿಗೆ ಪ್ರಶಂಸೆ

ಹಿಮಾಚಲ ಪ್ರದೇಶದ ಕುಲು ಮಾನಲಿ ನಿಶಾಲಾ ಎಂಬಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಒನ್​ ಸ್ಟೇಟ್​ ಒನ್​ ಆರ್ಟಿಸ್ಟ್​ ಎಂಬ ಶೀರ್ಷಿಕೆಯ ಕಾರ್ಯಾಗಾರದಲ್ಲಿ ಸೊರಬ ತಾಲೂಕನ ಹೆಚ್ಚೆ ಗ್ರಾಮದ ವಿಶ್ವನಾಥ ಎಂ ಇಕ್ಕೇರಿ ಪ್ರಮಾಣ ಪತ್ರ ಪಡೆಯುತ್ತಿರುವುದು.
ಹಿಮಾಚಲ ಪ್ರದೇಶದ ಕುಲು ಮಾನಲಿ ನಿಶಾಲಾ ಎಂಬಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಒನ್​ ಸ್ಟೇಟ್​ ಒನ್​ ಆರ್ಟಿಸ್ಟ್​ ಎಂಬ ಶೀರ್ಷಿಕೆಯ ಕಾರ್ಯಾಗಾರದಲ್ಲಿ ಸೊರಬ ತಾಲೂಕನ ಹೆಚ್ಚೆ ಗ್ರಾಮದ ವಿಶ್ವನಾಥ ಎಂ ಇಕ್ಕೇರಿ ಪ್ರಮಾಣ ಪತ್ರ ಪಡೆಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹಸೆ ಚಿತ್ತಾರ ಕಲಾವಿದನಿಗೆ ಪ್ರಶಂಸೆ
  • 28 ರಾಜ್ಯಗಳಿಂದ ಭಾಗವಹಿಸಿದ್ದ ಕಲಾ ಪ್ರತಿಭೆಗಳು
  • ರಾಷ್ಟ್ರೀಯ ಮಟ್ಟದ ಕಾರ್ಯಾಗಾರ
ಸೊರಬ: ಹಿಮಾಚಲ ಪ್ರದೇಶದ ಕುಲು ಮಾನಲಿ ನಿಶಾಲಾ ಎಂಬಲ್ಲಿ ಮೇ 1ರಿಂದ 9ರವರಗೆ ನಡೆದ ರಾಷ್ಟ್ರೀಯ ಮಟ್ಟದ ಒನ್​ ಸ್ಟೇಟ್​ ಒನ್​ ಆರ್ಟಿಸ್ಟ್​ ಎಂಬ ಶೀರ್ಷಿಕೆಯ ಕಾರ್ಯಾಗಾರದಲ್ಲಿ ದೇಶದ 28 ರಾಜ್ಯಗಳಿಂದ ಜಾನಪದ, ಸಾಂಪ್ರದಾಯಿಕ, ಕಲಾ ಪ್ರತಿಭೆಗಳು ಭಾಗವಹಿಸಿದ್ದರು. ಅದರಲ್ಲಿ ಕರ್ನಾಟಕದಿಂದ ಸೊರಬ ತಾಲೂಕಿನ ಹೆಚ್ಚೆ ಗ್ರಾಮದ ಪ್ರತಿಭಾನ್ವಿತ ಹಸೆ ಚಿತ್ತಾರ ಕಲಾವಿದ ವಿಶ್ವನಾಥ ಜಿ. ಇಕ್ಕೇರಿ ಭಾಗವಹಿಸಿ ಪ್ರಮಾಣ ಪತ್ರ ಪಡೆದಿದ್ದಾರೆ.
ಪ್ರಾದೇಶಿಕ ಜನಪದ ಕಲೆಯಾದ ಹಸೆ ಚಿತ್ತಾರ ಬಿಡಿಸುವ ಕಲೆಯಲ್ಲಿ ಮೆಚ್ಚುಗೆ ಪಡೆದು ತಾಲೂಕಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದ , ಬಹುಮುಖ ಪ್ರತಿಭೆ ವಿಶ್ವನಾಥ ಅವರು ಜಾನಪದ ಕಲಾವಿದ, ಉತ್ತಮ ಗಾಯಕ, ಕೃಷಿಕರೂ ಹೌದು. ಹಸೆ ಚಿತ್ತಾರ ಬಿಡಿಸುವ ಕಲೆಯಲ್ಲಿ ಅಭಿರುಚಿ ಬೆಳೆಸಿಕೊಂಡು ಚೆನ್ನೆ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮದೇ ಆದ ಪ್ರತಿಭೆ ಪ್ರದರ್ಶಿಸಿದ್ದಾರೆ. ಅದರಂತೆ ಹಿಮಾಚಲ ಪ್ರದೇಶದ ಕುಲು ಮಾನಲಿ ನಿಶಾಲಾ ಎಂಬಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿರುವುದು ತಾಲೂಕಿಗೆ ಹೆಮ್ಮಯ ವಿಷಯ.
ಹಸೆ ಚಿತ್ತಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದು ಮನ್ನಣೆ ಹೊಂದಬೇಕು. ಇಂತಹ ಹಸೆ ಚಿತ್ತಾರ ಕಲಾವಿದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಅಳಿವಿನಂಚಿನಲ್ಲಿರುವ ಈ ಹಸೆ ಚಿತ್ತಾರವನ್ನು ಮುಂದಿನ ಪೀಳಿಗೆಗೆ ಪರಿಚಯವಾಗಬೇಕು ಎಂಬುದು ಅವರ ಆಶಯ. ಈ ದಿಸೆಯಲ್ಲಿ ಹಸೆ ಚಿತ್ತಾರ ಕಲೆಯನ್ನು ಪ್ರದರ್ಶಿಸುವ ಮೂಲಕ ಕರ್ನಾಟಕದ ಪಾರಂಪರಿಕ ಕಲೆಯನ್ನು ಅನಾವರಣಗೊಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net