ಅಡಕೆ ಬೆಳೆಯನ್ನು ಏಕ ಬೆಳೆಯಾಗಿ ಬೆಳೆಯದೆ ಹೂವು, ಹಣ್ಣು, ಬಾಳೆ, ತರಕಾರಿ, ಕಾಳು ಮೆಣಸು ಸೇರಿದಂತೆ ಬಹುಬೆಳೆ ಪದ್ಧತಿಯನ್ನು ಅನುಸರಿಸಿದಾಗ ಕೃಷಿ ಲಾಭದಾಯಕವಾಗುತ್ತದೆ. ಇದರಿಂದ ಯಾವುದೇ ಒಂದು ಬೆಳೆ ಕೈಕೊಟ್ಟರೂ ಆರ್ಥಿಕ ನಷ್ಟದಿಂದ ಪಾರಾಗಲು ಸಾಧ್ಯವಿದೆ. ರೈತರಿಗೆ ಕೃಷಿ ಇಲಾಖೆ ಅನೇಕ ಕಾರ್ಯಕ್ರಮಗಳ ಮೂಲಕ ಜಾಗೃತಗೊಳಿಸುವ ಕೆಲಸ ಮಾಡುತ್ತದೆ ಎಂದರು.