ಸೊರಬದ ಹೊಪೇಟೆ ಬಡವಣೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ತಾಲೂಕು ಬಿಜೆಪಿ ಮುಖಂಡರ ಸಭೆ ನಡೆಯಿತು. ಗಜಾನನ ರಾವ್, ಎ.ಎಲ್. ಅರವಿಂದ, ಗುರುಪ್ರಸನ್ನ ಗೌಡ, ಸುರೇಶ್, ಹರೀಶ್ ಬಸವರಾಜ್ ಇತರರಿದ್ದರು
Published on:
Copied
Follow Us
ಸೊರಬ: ಯುವಕರನ್ನು ಒಗ್ಗೂಡಿಸಿ ಉತ್ಸಾಹದಿಂದ ಪಕ್ಷ ಸಂಘಟಿಸಿಕೊಂಡು ಹೋಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಮನ ಬಂದಂತೆ ಮಾತನಾಡುವ ಕುಮಾರ್ ಬಂಗಾರಪ್ಪ ಅವರ ಹೇಳಿಕೆಯನ್ನು ವಿರೋಧಿಸುತ್ತೇವೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ನಿರಂಜನ್ ಕುಪ್ಪಗಡ್ಡೆ ಹೇಳಿದರು.
ಮಂಗಳವಾರ ಪಟ್ಟಣದ ಹೊಪೇಟೆ ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ತಾಲೂಕು ಮುಖಂಡರ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯಿಂದ ತಾಲೂಕನ್ನು ಪ್ರತಿನಿಧಿಸಿ 5 ವರ್ಷ ಶಾಸಕರಾಗಿ ಅಧಿಕಾರ ಅನುಭವಿಸಿದ ಕುಮಾರ್ ಬಂಗಾರಪ್ಪ ನಮ್ಮ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಇವರನ್ನು 2018ರಲ್ಲಿ ಪಕ್ಷದ ಕಾರ್ಯಕರ್ತರೆಲ್ಲ ಒಟ್ಟಾಗಿ ಪಕ್ಷದಿಂದ ಆಯ್ಕೆ ಮಾಡಿದ್ದೆವು. ಆಗ ಅವರು ಮಾಡಿದ ಕೆಲಸ ರೈತರಿಗೆ, ಬಡವರಿಗೆ ತೊಂದರೆ ಕೊಡುವುದಾಗಿತ್ತು. ಪ್ರಾಮಾಣಿಕ ಕಾರ್ಯಕರ್ತರನ್ನು ದೂರವಿಟ್ಟು ದ್ವೇಷದ ರಾಜಕಾರಣ ಮಾಡಿರುವುದೇ ಅವರ ಸಾಧನೆ. ನಂತರದ ಚುನಾವಣೆಯಲ್ಲಿ ಸೋತ ನಂತರ ತಾಲೂಕಿನ ಕಡೆಗೆ ಮುಖ ಮಾಡಲಿಲ್ಲ ಎಂದರು.
ಪಕ್ಷಕೆ ನಿಮ್ಮ ಕೊಡುಗೆ ಏನು ತಂದೆ ಬಂಗಾರಪ್ಪ ಅವರ ಹೆಸರನ್ನು ನಿಮ್ಮ ಹೆಸರಿನ ಮುಂದೆ ಇಟ್ಟುಕೊಂಡು ರಾಜಕಾರಣ ಮಾಡುವ ನೀವು ಮೊದಲು ನಿಮ್ಮನ್ನು ನೀವು ತಿದ್ದಿಕೊಂಡು ನಂತರ ಬೇರೆಯವರ ಬಗ್ಗೆ ಮಾತನಾಡಿ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ನಿಮ್ಮ ಮನಸ್ಥಿತಿಯನ್ನು ತಿದ್ದಿಕೊಂಡು ಅವರ ವಿರುದ್ಧ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು, ಇಲ್ಲಾವಾದರೆ ಪಕ್ಷ ನಿಮಗೆ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಉಪಾಧ್ಯಕ್ಷ ಗಜಾನನ ರಾವ್, ಮಾಜಿ ಬಿಜೆಪಿ ತಾಲೂಕು ಅಧ್ಯಕ್ಷ ಎ.ಎಲ್. ಅರವಿಂದ, ಪ್ರಮುಖರಾದ ಗುರುಪ್ರಸನ್ನಗೌಡ, ಸುರೇಶ್, ಹರೀಶ್, ಅರುಣ್ ಪುಟ್ಟನಳ್ಳಿ, ಬೆನವಪ್ಪ, ರಾಮಚಂದ್ರ, ಬಸವರಾಜ್ ಇತರರಿದ್ದರು.