ಶಿಕಾರಿಪುರ ಡಿವೈಎಸ್‌ಪಿ(DYSP) ಕೆ.ಕೇಶವ ಮೇಲ್ವಿಚಾರಣೆಯಲ್ಲಿ, ಶಿಕಾರಿಪುರದ ಸಿಪಿಐ ಮಹಾಂತೇಶ್ ಕೆ ಲಂಬಿ ಮತ್ತು ಸೊರಬ ಸಿಪಿಐ(CPI) ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೆ.ಸೋಮನಾಯ್ಕ, ಶಶಿಧರ್ ಆರೋಪಿ ಮನೆಯನ್ನು ಪತ್ತೆ ಮಾಡಿದ್ದರು. ಆದರೆ ಆರೋಪಿ ಭಾಷಾ ಸಾಬ್ ಕಳೆದೊಂದು ತಿಂಗಳ ಹಿಂದೆಯೇ ಮೃತಪಟ್ಟಿರುವುದು ತನಿಖೆ ವೇಳೆ ದೃಢಪಟ್ಟಿದೆ. ಹಾಗಾಗಿ ಈ ಪ್ರಕರಣ ಮುಕ್ತಾಯ ಮಾಡುವ ಕುರಿತು ನ್ಯಾಯಾಲಯಕ್ಕೆ ಪೊಲೀಸರು ವರದಿ ಸಲ್ಲಿಸಿ ಕ್ರಮ ಕೈಗೊಂಡಿದ್ದಾರೆ.