ಪ್ರಧಾನಿ ಹೇಳಿಕೆ ಆರ್ಥಿಕ ಭದ್ರತೆಗೆ ಪೂರಕ | Aaraga jnanendra

ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ
Published on
ತೀರ್ಥಹಳ್ಳಿ: ಮಧ್ಯಪ್ರಾಚ್ಯದ ಯುದ್ಧ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಚಿನ್ನದ ಮಿತ ಬಳಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಜನತೆಗೆ ನೀಡಿರುವ ಕರೆ ದೇಶದ ಆರ್ಥಿಕ ಭದ್ರತೆಗೆ ಪೂರಕವಾಗಿದೆ. ಈ ಕುರಿತಂತೆ ಕಾಂಗ್ರೆಸ್ ಪಕ್ಷದ ನಾಕರ ಹೇಳಿಕೆ ಖಂಡನೀಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಹೇಳಿಕೆ ನೀಡಿರುವ ಅವರು, ಅಂದಿನ ಪ್ರಧಾನಮಂತ್ರಿಗಳಾಗಿದ್ದ ಲಾಲ್ ಬಹಾದೂರ್ ಶಾಸಿ ಅವರು ಪ್ರಧಾನಿ ಆಗಿದ್ದ ಸಂದರ್ಭ ಯುದ್ಧವಾದಾಗ ವಾರಕ್ಕೆ ಒಂದು ಊಟ ಬಿಡುವಂತೆ ದೇಶದ ಪ್ರಜೆಗಳಿಗೆ ಕರೆ ನೀಡಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಚಿನ್ನವನ್ನು ಅಗತ್ಯಕ್ಕಿಂತ ಹೆಚ್ಚು ಖರೀದಿಸದಂತೆ ಮನವಿ ಮಾಡಿದ್ದರು. ಆರ್ಥಿಕ ಸಚಿವರಾಗಿದ್ದ ಎಂ.ಎ.ಚಿದಂಬರಂ ಅವರು ಆಮದು ಚಿನ್ನದ ಮೇಲೆ ಮೂರು ಬಾರಿ ತೆರಿಗೆ ಹೇರಿದ್ದನ್ನು ಕಾಂಗ್ರೆಸಿನವರು ಮರೆತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಯುದ್ಧದ ಪರಿಣಾಮ ಇಡೀ ವಿಶ್ವದ ಆರ್ಥಿಕ ಕ್ಷೇತ್ರ ಅಲ್ಲೋಲ ಕಲ್ಲೊಲವಾಗಿದೆ. ಭಾರತದ ಆರ್ಥಿಕ ಕ್ಷೇತ್ರದ ಮೇಲೂ ಇದರ ದುಷ್ಪರಿಣಾಮ ಬೀರಿದೆ. 4ನೇ ಅತಿ ದೊಡ್ಡ ಆರ್ಥಿಕ ದೇಶವಾಗಿದ್ದ ಭಾರತ 6 ನೇ ಸ್ಥಾನಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಕರೊನಾ ಅವಧಿಯಲ್ಲಿದ್ದಂತೆ ದೇಶದ ಆರ್ಥಿಕ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net